ಬೆಂಗಳೂರು: ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ವಾರ್ಷಿಕ 6 ಸಾವಿರ ರೂಪಾಯಿ ನೆರವು ನೀಡಲಿದೆ. ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಪಿಎಂ ಕಿಸಾನ್ ಸಮ್ಮಾನ್ ಕರ್ನಾಟಕ ಯೋಜನೆಯಡಿ ವಾರ್ಷಿಕ 4000 ರೂಪಾಯಿ ನೀಡಲಿದೆ.
ಆದರೆ, ರೈತರಿಗೆ ಎರಡನೇ ಕಂತು ಕೈಸೇರಿಲ್ಲ. ಫಲಾನುಭವಿಗಳ ಖಾತೆಗೆ ಇನ್ನೂ ಕಿಸಾನ್ ಸಮ್ಮಾನ್ ಕರ್ನಾಟಕ ಯೋಜನೆಯ ಹಣ ಜಮಾ ಆಗಿಲ್ಲ. ರಾಜ್ಯದ ಸುಮಾರು 51.56 ಲಕ್ಷ ಫಲಾನುಭವಿಗಳಿಗೆ ಸುಮಾರು 1033 ಕೋಟಿ ರೂಪಾಯಿ ಹಣ ಜಮಾ ಮಾಡಬೇಕಿದೆ. ಕಳೆದ ವರ್ಷ ಜುಲೈನಲ್ಲಿ ರೈತರ ಖಾತೆಗೆ ಹಣ ಪಾವತಿಯಾಗಿದೆ. ಎರಡನೇ ಕಂತಿನ ಹಣ ಪಾವತಿಯಾಗಿಲ್ಲ. ಅನೇಕ ರೈತರಿಗೆ ಮೊದಲ ಕಂತಿನ ಹಣ ಕೂಡ ಬಂದಿಲ್ಲ ಎಂದು ಹೇಳಲಾಗಿದೆ.