ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ ರೈತರಿಗೆ ಒಟ್ಟು 20 ಹಂತಗಳಲ್ಲಿ 84,982 ಫಲಾನುಭವಿಗಳಿಗೆ 60.22 ಕೋಟಿ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 6,800 ರೂ. ಹಾಗೂ ಹೆಚ್ಚುವರಿ ಪರಿಹಾರ 6,800 ರೂ. ಸೇರಿದಂತೆ ಒಟ್ಟು 13,600ರೂ., ನೀರಾವರಿ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 13,500 ರೂ. ಹಾಗೂ ಹೆಚ್ಚುವರಿ ಪರಿಹಾರ 11,500 ರೂ. ಸೇರಿದಂತೆ 25,000 ರೂ., ವಾರ್ಷಿಕ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 18,000 ರೂ. ಹಾಗೂ ಹೆಚ್ಚುವರಿ ಪರಿಹಾರ 10,000 ರೂ. ಸೇರಿದಂತೆ ಒಟ್ಟು 28,000 ರೂ.ಗಳ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ 80,412 ರೈತರಿಗೆ ಹೆಚ್ಚುವರಿಯಾಗಿ 53.47 ಕೋಟಿ ರೂ.ಗಳ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ತಿಳಿಸಿದ್ದಾರೆ.