alex Certify ಆಧಾರ್ ಹೊಂದಿದ ರೈತರಿಗೆ ಗುಡ್ ನ್ಯೂಸ್, ವಿವಿಧ ಸೌಲಭ್ಯಕ್ಕಾಗಿ ಆಧಾರ್-ಪಹಣಿ ಜೋಡಣೆ ಆಂದೋಲನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಹೊಂದಿದ ರೈತರಿಗೆ ಗುಡ್ ನ್ಯೂಸ್, ವಿವಿಧ ಸೌಲಭ್ಯಕ್ಕಾಗಿ ಆಧಾರ್-ಪಹಣಿ ಜೋಡಣೆ ಆಂದೋಲನ

ಶಿವಮೊಗ್ಗ: ತಾಲ್ಲೂಕಿನ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಲು ಆಧಾರ್-ಪಹಣಿ ಜೋಡಣೆ ಆಂದೋಲನ ಕೈಗೊಳ್ಳಲಾಗಿದೆ.

ಕಂದಾಯ ಇಲಾಖೆ/ ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆ/ ಪಶು ಇಲಾಖೆ/ ರೇಷ್ಮೆ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ವಿವಿಧ ಸರ್ಕಾರಿ ಸೌಲಭ್ಯಗಳಾದ ಪಿಎಂ ಕಿಸಾನ್, ಕಿಸಾನ್ ಸಮ್ಮಾನ್, ಬೆಳೆ ವಿಮೆ, ಬೆಳೆ ಸಮೀಕ್ಷೆ, ಬೆಳೆ ಸಾಲ, ಬೆಳೆ ಹಾನಿ ಪರಿಹಾರ, ವಿವಿಧ ಯೋಜನೆಗಳಡಿ ಸಬ್ಸಿಡಿ ಹಾಗೂ ಕನಿಷ್ಠ ಬೆಂಬಲ ಯೋಜನೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವಾಗುವಂತೆ ಆಧಾರ್-ಪಹಣಿ ಜೋಡಣೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಗೆ ನಿಗದಿಯಾದ ಒಟ್ಟಾರೆ 68801 ಸರ್ವೆ ನಂಬರ್‍ಗಳಲ್ಲಿ ಈವರೆಗೆ 39439 ಸರ್ವೆ ನಂಬರ್ ಗಳಿಗೆ ಆಧಾರ್ ಜೋಡಣೆಯಾಗಿದೆ. ಉಳಿದ 29362 ಸರ್ವೆ ನಂಬರ್ ಗಳಿಗೆ ಆಧಾರ್ ಜೋಡಣೆ ಬಾಕಿ ಇದೆ. FID(Farmer Identification) ನೋಂದಣಿ ಮಾಡದೇ ಇರುವ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಪಹಣಿ ಪ್ರತಿ, ಮಾಲೀಕರ ಹೆಸರು, ವಿಳಾಸ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಮಾತ್ರ) ದಾಖಲಾತಿಗಳನ್ನು ಸಲ್ಲಿಸಿ FID ಸಂಖ್ಯೆ ಪಡೆದುಕೊಳ್ಳಬೇಕು

ಎಲ್ಲಾ ಸರ್ವೆ ನಂಬರ್‍ಗಳನ್ನು FRUITS  ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಲು ರೈತರು ಹತ್ತಿರದ ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳನ್ನು ಸಂಪರ್ಕಿಸುವಂತೆ  ತಹಶೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...