ಕಲಬುರ್ಗಿ: ರಾಜ್ಯದ 32 ಲಕ್ಷ ರೈತರಿಗೆ ಈ ವರ್ಷ 24,000 ಕೋಟಿ ರೂ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕಲಬುರ್ಗಿ ಜಿಲ್ಲೆ ಸೇಡಂ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ 18 ಲಕ್ಷ ರೈತರಿಗೆ ಸಾಲ ನೀಡಿದ್ದು, ನಾವು 32 ಲಕ್ಷ ರೈತರಿಗೆ ಸಾಲ ನೀಡುವ ಮೂಲಕ ಹೊಸ ದಾಖಲೆ ಬರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರೈತರ ಆದಾಯ ಹೆಚ್ಚಾಗಬೇಕಿದೆ. ಬಂಡವಾಳ ಹೂಡಿಕೆ ಇಲ್ಲದೇ ಕೃಷಿ ಆದಾಯ ಹೆಚ್ಚಾಗುವುದಿಲ್ಲ. ಸಹಕಾರ ಬ್ಯಾಂಕುಗಳಿಂದ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿದಲ್ಲಿ ಮೀಟರ್ ಬಡ್ಡಿ ಕಂಟಕದಿಂದ ಪಾರಾಗುತ್ತಾರೆ. ಶ್ರೀಮಂತರ ಮನೆಗೆ ಹೋಗಿ ಸಾಲ ಕೇಳುವುದು, ಒಡವೆ ಒತ್ತೆ ಇಡುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.