ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ಇ- ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನವಾಗಿದೆ.
ಜುಲೈ 31 ರೊಳಗೆ ಇ -ಕೆವೈಸಿ ಮಾಡಿಸದ ರೈತರಿಗೆ ಯೋಜನೆಯ ಅನುದಾನ ಖಾತೆಗೆ ಜಮಾ ಆಗುವುದಿಲ್ಲ. ಅರ್ಹ ರೈತರು ಇ -ಕೆವೈಸಿ ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಮೊಬೈಲ್ ಒಟಿಪಿ ಮೂಲಕ ಅಥವಾ ಗ್ರಾಹಕ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ನೀಡುವ ಮೂಲಕ ರೈತರು ಇ-ಕೆವೈಸಿ ಮಾಡಿಸಬಹುದು.