ರೈತ ಹೋರಾಟದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೇಶ ವಿರೋಧಿ ಅಲೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಟ್ವಿಟ್ಟರ್ ಗೆ ಸುಮಾರು 1400 ಖಾತೆಗಳನ್ನು ಬ್ಲಾಕ್ ಮಾಡುವಂತೆ ಸೂಚಿಸಿತ್ತು.
ಆದರೆ ಟ್ವಿಟ್ಟರ್, ಸರ್ಕಾರದ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದು, ಸರ್ಕಾರ ನೀಡಿದ್ದ ಪಟ್ಟಿಯಂತೆ ಟ್ವಿಟ್ಟರ್ ಖಾತೆಗಳನ್ನು ಈವರೆಗೆ ಬ್ಲಾಕ್ ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ಟ್ವಿಟ್ಟರ್ ವಿರುದ್ದ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾದ ಬೆನ್ನಲ್ಲೇ ಇದೀಗ 700 ಕ್ಕೂ ಅಧಿಕ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
ಈ ಮೊದಲು ಸರ್ಕಾರದ ಸೂಚನೆ ಕುರಿತಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಲು ಟ್ವಿಟ್ಟರ್ ಸಂಸ್ಥೆ ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ರವಿಶಂಕರ್ ಭೇಟಿಗೆ ನಿರಾಕರಿಸುತ್ತಿದ್ದಂತೆಯೇ ಬೆಚ್ಚಿಬಿದ್ದ ಟ್ವಿಟ್ಟರ್ ಸಂಸ್ಥೆ ಈಗ ದೇಶ ವಿರೋಧಿ ಟ್ವಿಟ್ಟರ್ ಖಾತೆಗಳ ವಿರುದ್ದ ಕ್ರಮಕ್ಕೆ ಮುಂದಾಗಿದೆ.