ಹೊಸ ವರ್ಷದ ಮೊದಲ ದಿನದಿಂದಲೇ ಅನೇಕ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ. ಈ ಎಲ್ಲದರ ನಡುವೆಯೇ ಯುಪಿಐ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ವದಂತಿಗಳಿಗೆ ಖುದ್ದು ಎನ್‌ಪಿಸಿಐ ತೆರೆ ಎಳೆದಿದೆ.
ಆನ್ಲೈನ್ ನಗದು ರವಾನೆಗೆ ಶುಲ್ಕ ವಿಧಿಸಲಾಗುವುದು ಎಂದು ಚಿಂತಿತರಾಗಿದ್ದ ಅನೇಕ ಮಂದಿಗೆ ಖುದ್ದು ಎನ್‌ಪಿಸಿಐ ಸಂದೇಶ ಕಳುಹಿಸಿದ್ದು, ಈ ಸುದ್ದಿ ಸುಳ್ಳಾಗಿದ್ದು ಯಾರೂ ಸಹ ಇದನ್ನು ನಂಬಬಾರದು ಎಂದಿದೆ.
“ಇಂಥ ಕಥೆಗಳನ್ನು ನಂಬಬೇಡಿ ಎಂದು ಎನ್‌ಪಿಸಿಐ ವಿನಂತಿಸಿಕೊಳ್ಳುತ್ತಿದ್ದು, ನಿಶ್ಚಿಂತೆಯಿಂದ ಯುಪಿಐ ವ್ಯವಹಾರಗಳನ್ನು ಮುಂದುವರೆಸಿ ಎಂದಿರುವ ಎನ್‌ಪಿಎಐ, “ಜನವರಿ 1, 2021ರಿಂದ ಯುಪಿಐ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ಸುದ್ದಿಗಳೆಲ್ಲಾ ಸುಳ್ಳು ಎಂದು ಖಾತ್ರಿ ಪಡಿಸುತ್ತೇವೆ” ಎಂದು ತಿಳಿಸಿದೆ.