alex Certify ಬಳಕೆದಾರರ ಹಿತಾಸಕ್ತಿಗಾಗಿ ಮುಖ್ಯ ಬದಲಾವಣೆಗೆ ಮುಂದಾಗಿದೆ ಫೇಸ್​ಬುಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ಹಿತಾಸಕ್ತಿಗಾಗಿ ಮುಖ್ಯ ಬದಲಾವಣೆಗೆ ಮುಂದಾಗಿದೆ ಫೇಸ್​ಬುಕ್​….!

ಬಳಕೆದಾರರಿಗೆ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ನೀಡಲಾಗುವ ಶಿಫಾರಸುಗಳನ್ನ ತೆಗೆದು ಹಾಕುವ ಪ್ರಕ್ರಿಯೆಯನ್ನ ಪ್ರಾರಂಭಿಸಿದ್ದೇವೆ ಎಂದು ಫೇಸ್​​ಬುಕ್​ ಹೇಳಿದೆ. ಸಾಮಾಜಿಕ ವೇದಿಕೆಯಲ್ಲಿ ಘರ್ಷಣೆಯನ್ನ ತಪ್ಪಿಸುವ ಸಲುವಾಗಿ ಫೇಸ್​ಬುಕ್​ ಈ ನಿರ್ಧಾರ ಕೈಗೊಂಡಿದೆ.

ಇದು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳ ನಿಯಮವನ್ನ ಮುರಿಯುವ ಗುಂಪುಗಳತ್ತ ಜನರಿಗೆ ಆಕರ್ಷಣೆ ಆಗದೇ ಇರುವಂತೆ ಮಾಡಲು ವಿವಿಧ ಕ್ರಮಗಳನ್ನ ಕೈಗೊಂಡಿರೋದಾಗಿ ಸಂಸ್ಥೆ ಹೇಳಿದೆ. ಇಂತಹ ಗುಂಪುಗಳ ಶಿಫಾರಸ್ಸುಗಳನ್ನ ಕಡಿಮೆ ತೋರಿಸೋದು ಹಾಗೂ ಈ ಹಿಂದೆ ನಿಯಮಗಳನ್ನ ಉಲ್ಲಂಘಿಸಿದ ಗುಂಪುಗಳನ್ನ ಸೇರಲು ಹೊರಟವರನ್ನ ಎಚ್ಚರಿಸೋದು ಈ ರೀತಿ ಅನೇಕ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ.

ಕ್ರೀಡೆ ಹಾಗೂ ಸಂಗೀತದಂತಹ ಸಾಮಾನ್ಯ ಹಿತಾಸಕ್ತಿ ಹೊಂದಿರುವ ಬಳಕೆದಾರರ ಗುಂಪನ್ನ ಒಂದು ಗ್ರೂಪ್​ನಲ್ಲಿ ಸೇರುವಂತೆ ಮಾಡಿ ಅಲ್ಲಿ ಸಮಾಜಘಾತಕ ಮಾಹಿತಿಗಳನ್ನ ಹರಡುವ ಕೆಲಸ ಮಾಡಲಾಗ್ತಿದೆ ಎಂದು ನಾಗರಿಕ ಹಕ್ಕುಗಳ ಸಂಸ್ಥೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...