ಸಾಮಾಜಿಕ ಜಾಲತಾಣಗಳ ಪೈಕಿ ಫೇಸ್ ಬುಕ್ ಹಾಗೂ ವಾಟ್ಸಾಪ್ ಮುಂಚೂಣಿಯಲ್ಲಿವೆ. ವಾಟ್ಸಾಪ್ ಈಗ ಮಾರ್ಕ್ ಝುಕರ್ಬರ್ಗ್ ಒಡೆತನದ ಫೇಸ್ ಬುಕ್ ಸುಪರ್ದಿಯಲ್ಲಿದ್ದು, ಇದೀಗ ಇವೆರೆಡರ ನಡುವಿನ ಸಂವಹನಕ್ಕೆ ವೇದಿಕೆ ಸಿದ್ದವಾಗಿದೆ.
ಹೌದು, ಇನ್ನು ಮುಂದೆ ವಾಟ್ಸಾಪ್ ಬಳಕೆದಾರರು ಫೇಸ್ ಬುಕ್ ಮೆಸೆಂಜರ್ ಹೊಂದಿರುವವರ ಜೊತೆ ಚಾಟ್ ಮಾಡಬಹುದಾಗಿದೆ. ಅದೇ ರೀತಿ ಫೇಸ್ ಬುಕ್ ಮೆಸೆಂಜರ್ ಆಪ್ ಬಳಕೆದಾರರು ವಾಟ್ಸಾಪ್ ಬಳಕೆದಾರರ ಜೊತೆ ಚಾಟ್ ಮಾಡಬಹುದಾಗಿದೆ.
ಈ ಹೊಸ ವೈಶಿಷ್ಟ ಈಗಾಗಲೇ ಸಿದ್ದವಾಗಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಫೇಸ್ ಬುಕ್ ಕೈಗೊಂಡಿರುವ ಈ ತೀರ್ಮಾನದಿಂದಾಗಿ ಇವೆರೆಡೂ ಆಪ್ ಗಳ ಮತ್ತಷ್ಟು ಪ್ರಸಿದ್ದಿಗೆ ಬರುವುದು ಖಚಿತವಾಗಿದೆ.