ಇನ್ ಸ್ಟಾಗ್ರಾಂ ಬಳಕೆದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಹಾಕಿ ಹಣ ಗಳಿಸುವ ಬಳಕೆದಾರರಿಗೆ ಫೇಸ್ಬುಕ್ ಗಳಿಕೆ ಅವಕಾಶ ನೀಡ್ತಿದೆ. ಸಣ್ಣ ವೀಡಿಯೊಗಳನ್ನು ಗಮನದಲ್ಲಿಟ್ಟುಕೊಂಡಿರುವ ಫೇಸ್ಬುಕ್ ವಿಶೇಷ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.
ರಾಯಿಟರ್ಸ್ ಸುದ್ದಿಯ ಪ್ರಕಾರ, ಭಾರತೀಯ ಬಳಕೆದಾರರಿಗಾಗಿ ಫೇಸ್ಬುಕ್ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇನ್ಮುಂದೆ ಫೇಸ್ಬುಕ್ ನಲ್ಲಿ, ಇನ್ ಸ್ಟಾಗ್ರಾಂ ರೀಲ್ಸ್ ವೀಕ್ಷಣೆ ಮಾಡಬಹುದಾಗಿದೆ. ವರದಿಯ ಪ್ರಕಾರ, ಭಾರತದ ಕೆಲವು ಇನ್ ಸ್ಟಾಗ್ರಾಂ ಬಳಕೆದಾರರಿಗೆ ತಮ್ಮ 30 ಸೆಕೆಂಡುಗಳ ರೀಲ್ಸ್ ವೀಡಿಯೊವನ್ನು ಫೇಸ್ಬುಕ್ ನ್ಯೂಸ್ ಫೀಡ್‌ನಲ್ಲಿ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹೊಸ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ. ಶೀಘ್ರದಲ್ಲೇ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.
ಕಳೆದ ವರ್ಷ ಭಾರತ ಸರ್ಕಾರ ಟಿಕ್‌ಟಾಕ್ ನಿಷೇಧಿಸಿದ್ದರಿಂದ, ಈ ಜಾಗ ತುಂಬಲು ಫೇಸ್ಬುಕ್ ಉತ್ಸುಕವಾಗಿದೆ. ಇದಕ್ಕಾಗಿಯೇ ಕಳೆದ ವರ್ಷ ಫೇಸ್ಬುಕ್ ಇನ್ಸ್ಟಾಗ್ರಾಮ್ ರೀಲ್‌ಗಳನ್ನು ತರಾತುರಿಯಲ್ಲಿ ಪ್ರಾರಂಭಿಸಿದೆ. ಆದ್ರೆ ಟಿಕ್ ಟಾಕ್ ನಷ್ಟು ರೀಲ್ಸ್ ಪ್ರಸಿದ್ಧಿ ಪಡೆದಿಲ್ಲ.