ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ 533 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಹ್ಯಾಕರ್ ಗಳು ಇಷ್ಟೊಂದು ಪ್ರಮಾಣದ ಬಳಕೆದಾರರ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅಂದ ಹಾಗೆ, ನಿಮ್ಮ ಡೇಟಾ ಸೋರಿಕೆಯಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು.
533 ಮಿಲಿಯನ್ ಫೇಸ್ಬುಕ್ ಖಾತೆಗಳ ಡೇಟಾ ಶನಿವಾರ ಸೋರಿಕೆಯಾಗಿದೆ. ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ ಬರ್ಗ್ ಅವರ ಖಾಸಗಿ ಮಾಹಿತಿಯು ಸೋರಿಕೆಯಾಗಿದೆ. 533 ಮಿಲಿಯನ್ ಫೇಸ್ಬುಕ್ ಬಳಕೆದಾರರ ಡೇಟಾಬೇಸ್ ಸೋರಿಕೆಯಾಗಿ ಇಮೇಲ್ ಐಡಿ, ಫೋನ್ ಸಂಖ್ಯೆ, ಫೋಟೋ ಮೊದಲಾದ ವಿವರಗಳು ಬಹಿರಂಗವಾಗಿವೆ.
ನಿಮ್ಮ ಡೇಟಾ ಸೋರಿಕೆಯಾಗಿದೆ ಎಂಬುದನ್ನು ನೀವು ತಿಳಿಯಲು ಮಾಹಿತಿ ಇಲ್ಲಿದೆ. ಇದಕ್ಕೆಂದೇ ಕೆಲವು ವಿಶ್ವಾಸಾರ್ಹ ಸೈಬರ್ ಸುರಕ್ಷತಾ ವೆಬ್ ಸೈಟ್ ಗಳಿವೆ. hasibeenpwned.com ಅವುಗಳಲ್ಲಿ ಒಂದು ವೆಬ್ ಸೈಟ್ ಆಗಿದೆ.
ವೆಬ್ಸೈಟ್ ನಲ್ಲಿ ಸರ್ಚ್ ಪಟ್ಟಿಯಲ್ಲಿ ನಿಮ್ಮ ಇಮೇಲ್ ಐಡಿ ನಮೂದಿಸಿ ಎಂಟರ್ ಒತ್ತಿ. ನಿಮ್ಮ ಇಮೇಲ್ ಸೋರಿಕೆಯಾದ ಸಂಪೂರ್ಣ ಪಟ್ಟಿಯನ್ನು ನಿಮ್ಮ ಡೇಟಾವನ್ನು ಹೊಂದಿರುವ ಮತ್ತು ಹಿಂದೆ ಉಲ್ಲಂಘನೆಯಾದ ಕಂಪನಿಗಳ ಪಟ್ಟಿಯನ್ನು ಸಹ ವೆಬ್ಸೈಟ್ ನಿಮಗೆ ನೀಡಲಿದೆ.
ನಿಮ್ಮ ಇಮೇಲ್ ಹೊಂದಾಣಿಕೆ ಮಾಡಿಕೊಂಡಿದ್ದರೆ ವೆಬ್ಸೈಟ್ ನಿಮಗೆ ಎಚ್ಚರಿಕೆ ನೀಡುತ್ತದೆ. ನಿಮ್ಮ ಖಾತೆಗೆ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ವೈಯಕ್ತಿಕ ಗುರುತಿನ ದಾಖಲೆಗಳು ಸರಿಯಾಗಿದ್ದರೆ ಅವುಗಳನ್ನು ನವೀಕರಿಸಿ. ಆದಷ್ಟು ಬೇಗನೆ ಅಂತಹ ಸೋರಿಕೆಯಾದ ಮಾಹಿತಿ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ತೊಂದರೆಯಾಗಬಹುದು. ಹ್ಯಾಕರ್ ಗಳು ನಿಮ್ಮ ದಾಖಲೆಗಳನ್ನು ಅಕ್ರಮ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ.
ಪ್ರತಿ ಕೆಲವು ತಿಂಗಳಿಗೊಮ್ಮೆ ನಿಮ್ಮ ಎಲ್ಲಾ ಪಾಸ್ವರ್ಡ್ ಗಳನ್ನು ಬದಲಿಸಿ. ನಿಮ್ಮ ಪಾಸ್ಪೋರ್ಟ್, ಚಾಲನಾ ಪರವಾನಿಗೆ ಮತ್ತು ಗುರುತಿನ ದಾಖಲೆಗಳನ್ನು ಸುರಕ್ಷಿತವಾಗಿವೆಯೇ ಮತ್ತು ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಎಲ್ಲಾ ಪಾಸ್ವರ್ಡ್ ಗಳನ್ನು ನೋಡಿಕೊಳ್ಳಲು ಪಾಸ್ವರ್ಡ್ ಮ್ಯಾನೇಜರ್ ಬಳಸುವುದು ಉತ್ತಮ.
ಕೆಲವು ಉತ್ತಮ ಪಾಸ್ವರ್ಡ್ ನಿರ್ವಾಹಕ ಸೇವೆಗಳು ಇವೆ. 1 ಪಾಸ್ವರ್ಡ್, ಲಾಸ್ಟ್ ಪಾಸ್ ಅಥವಾ ಕೀಪರ್ ಇವುಗಳನ್ನು ಪಾವತಿ ಸೇವೆಗಳಾಗಿವೆ. ಸಂಕೀರ್ಣವಾದ ಪಾಸ್ ವರ್ಡ್ ಗಳನ್ನು ಸ್ವಯಂಚಾಲಿತವಾಗಿ ರಚಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಇವುಗಳನ್ನು ಬಳಕೆದಾರರಿಗೆ ಹ್ಯಾಕ್ ಮಾಡಲು ತುಂಬಾ ಕಷ್ಟ. ನಿಮ್ಮ ಡೇಟಾ ಈಗಾಗಲೇ ಸೋರಿಕೆಯಾಗಿದ್ದರೆ, ನಿಮ್ಮ ಮಾಹಿತಿ ತಪ್ಪಾದ ಕಾರಣಗಳಿಗೆ ಬಳಸಲು ಪ್ರಯತ್ನಿಸುವ ಸ್ಕ್ಯಾಮರ್ ಗಳಿಗೆ ಅವಕಾಶವಾಗದಂತೆ ನೀವು ಜಾಗರೂಕರಾಗಿರಬೇಕು.
ವಿಶ್ವದಾದ್ಯಂತ ಸುಮಾರು 106 ದೇಶಗಳ 533 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಯುಎಸ್ ನಲ್ಲಿ ಸುಮಾರು 32 ಮಿಲಿಯನ್, ಯುಕೆಯಲ್ಲಿ 11 ಮಿಲಿಯನ್ ಮತ್ತು ಭಾರತದಲ್ಲಿ ಸುಮಾರು 6 ಮಿಲಿಯನ್ ದಾಖಲೆಗಳು ಸೋರಿಕೆಯಾಗಿವೆ. ಬಹಿರಂಗಪಡಿಸಿದ ಮಾಹಿತಿಯು ಬಳಕೆದಾರರ ಸ್ಥಳ, ಪೂರ್ಣ ಹೆಸರು, ಜನ್ಮದಿನಾಂಕ, ಬಯೋಡೇಟಾ, ಇಮೇಲ್ ಐಡಿಗಳು ಮತ್ತು ಪಾಸ್ವರ್ಡ್ಗಳು ಮತ್ತು ಫೋನ್ ಸಂಖ್ಯೆಗಳಂತಹ ಡೇಟಾವನ್ನು ಒಳಗೊಂಡಿದೆ.