
ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಸೇರಿದಂತೆ ಆನ್ಲೈನ್ ಅಪ್ಲಿಕೇಷನ್ ಗೆ ಬೇಡಿಕೆ ಜಾಸ್ತಿಯಾಗಿದೆ. ಆನ್ಲೈನ್ ಕ್ಲಾಸ್ ಗಳಿಗೆ ಜೂಮ್ ಅಪ್ಲಿಕೇಷನ್ ಹೆಚ್ಚಾಗಿ ಬಳಕೆಯಾಗ್ತಿದೆ. ಇದಕ್ಕೆ ಟಕ್ಕರ್ ನೀಡಲು ಈಗ ಫೇಸ್ಬುಕ್ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ.
ಹೊಸ ವೈಶಿಷ್ಟ್ಯವನ್ನು ಮೆಸೆಂಜರ್‌ಗೆ ಸೇರಿಸಲಾಗಿದೆ. ಇದು ಜೂಮ್ ವಿಡಿಯೋ ಕಾಲಿಂಗ್ ಪ್ಲಾಟ್‌ಫಾರ್ಮ್‌ಗೆ ಹೋಲುತ್ತದೆ. ಮೆಸೆಂಜರ್‌ನಲ್ಲಿಯೂ ಸಹ ವಿಡಿಯೊ ಕರೆ ಮಾಡುವಾಗ ಸ್ಕ್ರೀನ್ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಆಂಡ್ರಾಯ್ಡ್ ಮತ್ತು ಐಒಎಸ್ ನ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗುವುದು. ಇದರ ಅಡಿಯಲ್ಲಿ, ಗುಂಪು ವಿಡಿಯೊ ಕರೆಯ ಸಮಯದಲ್ಲಿ ನೀವು ಸ್ಕ್ರೀನ್ ಪರಸ್ಪರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.