ಕೋವಿಡ್-19 ಸಾಂಕ್ರಮಿದ ಕಾರಣ ಮುಂದಿಟ್ಟಿರುವ ನೇರ ತೆರಿಗೆ ಪಾವತಿದಾರರು ತೆರಿಗೆ ಆಡಿಟ್ ವರದಿ ಹಾಗೂ ಆದಾಯ ತೆರಿಗೆ ರಿಟರ್ನ್ಸ್ ವರದಿಗಳನ್ನು ಸಲ್ಲಿಸಲು ಇನಷ್ಟು ಕಾಲಾವಕಾಶ ಕೋರಿದ್ದಾರೆ.
ನೇರ ತೆರಿಗೆದಾರ ವೃತ್ತಿಪರರ ಸಂಘಟನೆ (ಡಿಟಿಪಿಎ) ಈ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ವಿನಂತಿ ಮಾಡಿದ್ದು, ಸೆಕ್ಷನ್ 44ಬಿ ಅಡಿ ಸಲ್ಲಿಸಬೇಕಾದ ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸಲು ಇರುವ ಕೊನೆಯ ದಿನವನ್ನು ಫೆಬ್ರವರಿ 28ರವರೆಗೂ ವಿಸ್ತರಿಸಲು ಆಗ್ರಹಿಸಿದೆ. ಇದೇ ವೇಳೆ 2020-21ರ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಇರುವ ಕೊನೆಯ ದಿನಾಂಕವನ್ನು ಮಾರ್ಚ್ 31, 2021ರವರೆಗೂ ವಿಸ್ತರಿಸಲು ಸಹ ವಿನಂತಿ ಮಾಡಲಾಗಿದೆ.
ಒಟ್ಟಾರೆ 5.25 ಕೋಟಿ ತೆರಿಗೆ ಪಾವತಿದಾರರ ಪೈಕಿ 3.75 ಕೋಟಿ ಮಂದಿ ಅದಾಗಲೇ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಮಿಕ್ಕವರ ಪೈಕಿ ದೊಡ್ಡ ಕಂಪನಿಗಳು ಹಾಗೂ ಕಾರ್ಪೋರೇಟ್ಗಳು ತೆರಿಗೆ ಆಡಿಟ್ ಮಾಡಬೇಕಾದ ಕಾರಣದಿಂದ ಡೆಡ್ಲೈನ್ ವಿಸ್ತರಣೆಗೆ ಮನವಿ ಮಾಡಲಾಗಿದೆ ಎಂದು ಡಿಟಿಪಿಎ ಚೇರ್ಮನ್ ನಾರಾಯಣ್ ಜೈನ್ ತಿಳಿಸಿದ್ದಾರೆ.