alex Certify ಬಿಗ್‌ ನ್ಯೂಸ್: ಕೊನೆಗೂ ಕಾರ್ಮಿಕ ನೀತಿ ನಿರ್ಬಂಧ ತೆರವುಗೊಳಿಸಿದ ಸೌದಿ ಅರೇಬಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಕೊನೆಗೂ ಕಾರ್ಮಿಕ ನೀತಿ ನಿರ್ಬಂಧ ತೆರವುಗೊಳಿಸಿದ ಸೌದಿ ಅರೇಬಿಯಾ

ದೀರ್ಘಕಾಲದ ಟೀಕೆಗೆ ಗುರಿಯಾಗಿದ್ದ ಕಾರ್ಮಿಕ ನೀತಿಯನ್ನ ಸುಧಾರಿಸುವ ಮೂಲಕ ವಲಸೆ ಕಾರ್ಮಿಕರ ಮೇಲಿದ್ದ ನಿರ್ಬಂಧಗಳನ್ನ ತೆಗೆದುಹಾಕಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.‌

ಮಾನವ ಹಕ್ಕುಗಳ ಗುಂಪು ಸೌದಿ ಅರೇಬಿಯಾದಲ್ಲಿದ್ದ ಕಾರ್ಮಿಕ ನೀತಿಯನ್ನ ಸುಧಾರಿಸುವಂತೆ ಹೇಳಿತ್ತು . ಸೌದಿ ಅರೇಬಿಯಾದಲ್ಲಿದ್ದ ಕಾರ್ಮಿಕ ನೀತಿ ಆಧುನಿಕ ಗುಲಾಮಗಿರಿ ಅಂತಾ ಟೀಕಿಸಲಾಗಿತ್ತು.

ಆದರೆ ಈಗ ಕಾರ್ಮಿಕ ನೀತಿಯನ್ನ ಸುಧಾರಿಸಲಾಗಿದ್ದು ಇದರನ್ವಯ ಕಾರ್ಮಿಕರು ತಮ್ಮ ಉದ್ಯೋಗದಾತರ ಅನುಮತಿ ಇಲ್ಲದೇ ನಿರ್ಗಮನ ವೀಸಾ ಪಡೆಯಬಹುದಾಗಿದೆ. ಈ ಹೊಸ ನಿಯಮಗಳು ಮಾರ್ಚ್ 14ರಿಂದ ಜಾರಿಗೆ ಬರಲಿದೆ.

ನಿರ್ಗಮನ ಹಾಗೂ ಮರುಪ್ರವೇಶ ಮಾಡುವ ವಲಸಿಗ ಕಾರ್ಮಿಕರು ಇನ್ಮುಂದೆ ಉದ್ಯೋಗದಾತರ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ. ಹಾಗೂ ದೇಶದಿಂದ ನಿರ್ಗಮನ ಮಾಡಲಿಚ್ಚಿಸುವ ಕಾರ್ಮಿಕರ ಮಾಹಿತಿಯನ್ನ ಉದ್ಯೋಗದಾತರಿಗೆ ವಿದ್ಯುನ್ಮಾನವಾಗಿ ತಿಳಿಸಲಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...