ಚಿನ್ನ – ಬೆಳ್ಳಿ ಎಂದೂ ಮೌಲ್ಯ ಕಳೆದುಕೊಳ್ಳದ ಆಭರಣಗಳು. ಇವು ಒಂದು ರೀತಿಯ ಉಳಿತಾಯ. ಮನೆಯಲ್ಲಿ ಹೆಚ್ಚು ಮೌಲ್ಯದ ಬಂಗಾರವನ್ನು ಇಡಲು ಜನರು ಭಯಪಡ್ತಾರೆ. ಹಾಗಾಗಿ ಬ್ಯಾಂಕ್ ಗಳಲ್ಲಿ ಆಭರಣವನ್ನು ಸುರಕ್ಷಿತವಾಗಿಡಲು ಲಾಕರ್ ಬಳಸ್ತಾರೆ. ಲಾಕರ್ ನಲ್ಲಿ ಆಭರಣ ಸುರಕ್ಷಿತವಾಗಿರುತ್ತದೆ. ಆದ್ರೆ ಯಾವುದೇ ಬಡ್ಡಿ ಸಿಗುವುದಿಲ್ಲ. ಜತೆಗೆ ಲಾಕರ್ ಗೆ ಶುಲ್ಕ ನೀಡಬೇಕಾಗುತ್ತದೆ. ಆದ್ರೆ ಆರ್ಬಿಐ ನಿಗದಿಪಡಿಸಿದ ಬ್ಯಾಂಕುಗಳಲ್ಲಿ ಚಿನ್ನ ಇಟ್ಟುಕೊಂಡು ಬಡ್ಡಿ ಗಳಿಸಬಹುದು.
ಇದು ಸ್ಥಿರ ಠೇವಣಿಯಂತೆ ಕೆಲಸ ಮಾಡುತ್ತದೆ. ಇದ್ರಲ್ಲಿ ನೀವು ಬಂಗಾರವನ್ನು ಠೇವಣಿಯಿಡುತ್ತೀರಿ. ಯೋಜನೆ ಮುಕ್ತಾಯದ ಸಮಯದಲ್ಲಿ ಬಡ್ಡಿ ಕೂಡ ನಿಮಗೆ ಸಿಗುತ್ತದೆ. ಮೆಚ್ಯುರಿಟಿ ಸಮಯದಲ್ಲಿ ಚಿನ್ನದ ಬೆಲೆ ಮಾರುಕಟ್ಟೆ ಬೆಲೆಯನ್ನು ಅವಲಂಬಿಸಿರುತ್ತದೆ. ಅದೇ ದರದಲ್ಲಿ ಬಡ್ಡಿ ಸಿಗುತ್ತದೆ.
ಆರ್‌ಬಿಐನ ಈ ಯೋಜನೆಯಡಿ ಯಾವುದೇ ಭಾರತೀಯರು ಗೋಲ್ಡ್ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಚಿನ್ನವನ್ನು ಕಾಯಿನ್ಸ್ ರೂಪದಲ್ಲಿ ಇಡಬೇಕು.
ಯಾವುದೇ ಹೂಡಿಕೆದಾರರು ಕನಿಷ್ಠ 30 ಗ್ರಾಂ ಚಿನ್ನವನ್ನು ಠೇವಣಿ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಹೂಡಿಕೆದಾರರು 1 ವರ್ಷದಿಂದ 15 ವರ್ಷಗಳ ನಡುವೆ ಯಾವುದೇ ಮಿತಿಯನ್ನು ಆಯ್ಕೆ ಮಾಡಬಹುದು. 1 ರಿಂದ 3 ವರ್ಷಗಳ ಅವಧಿಯನ್ನು ಅಲ್ಪಾವಧಿಯ ಬ್ಯಾಂಕ್ ಠೇವಣಿ ಎಂದು ಕರೆಯಲಾಗುತ್ತದೆ. 5 ರಿಂದ 7 ವರ್ಷಗಳ ಠೇವಣಿಗಳನ್ನು ಮಧ್ಯಮ ಅವಧಿಯ ಸರ್ಕಾರಿ ಠೇವಣಿ ಎಂದು ಕರೆಯಲಾಗುತ್ತದೆ. 12 ರಿಂದ 15 ವರ್ಷಗಳ ಠೇವಣಿಗಳನ್ನು ದೀರ್ಘಾವಧಿಯ ಸರ್ಕಾರಿ ಠೇವಣಿ ಎಂದು ಕರೆಯಲಾಗುತ್ತದೆ.
ಎಸ್‌ಟಿಬಿಡಿಯಲ್ಲಿ, 1 ವರ್ಷಕ್ಕೆ ಶೇಕಡಾ 0.50 ರಷ್ಟು ದರದಲ್ಲಿ ಬಡ್ಡಿ ನೀಡಲಾಗುವುದು. 1 ರಿಂದ 2 ವರ್ಷಗಳವರೆಗೆ ಈ ಬಡ್ಡಿ ಶೇಕಡಾ 0.55 ರಷ್ಟು ಮತ್ತು 2 ರಿಂದ 3 ವರ್ಷಗಳವರೆಗೆ ಇದು ವಾರ್ಷಿಕವಾಗಿ 0.60 ಶೇಕಡಾ ಇರುತ್ತದೆ.