ನವದೆಹಲಿ: ಕೇಂದ್ರದಿಂದ 34 ಅಗತ್ಯ ಔಷಧಗಳ ಬೆಲೆ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿವಿಧ ಸೋಂಕು ನಿವಾರಣೆಗೆ ಬಳಕೆ ಮಾಡುವ ಔಷಧ ಸೇರಿದಂತೆ ಹೊಸದಾಗಿ 34 ಔಷಧಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಅತ್ಯಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಈ ಔಷಧಗಳ ದರ ಇಳಿಕೆಯಾಗಲಿದೆ.
ಪಟ್ಟಿಯಿಂದ 26 ಔಷಧಗಳನ್ನು ಕೈ ಬಿಡಲಾಗಿದೆ. ದರ ನಿಯಂತ್ರಣ ಪಟ್ಟಿಯಲ್ಲಿ 384 ಔಷಧಗಳು ಇವೆ. ಸುಕ್ರಾಲ್ ಫೇಟ್, ವೈಟ್ ಪೆಟ್ರೋಲಿಯಂ, ಆಥೆನೋಲೋಲ್, ಮಿಥೈಲ್ ಡೋಪ ಸೇರಿದಂತೆ 26 ಔಷಧಗಳನ್ನು ದರ ನಿಯಂತ್ರಣ ಪಟ್ಟಿಯಿಂದ ಕೈ ಬಿಡಲಾಗಿದೆ.
ಐವರ್ ಮೆಸಿಟಿನ್, ಮುಪಿರೋಸಿನ್, ಇನ್ಸುಲಿನ್ ಗ್ಲಾರ್ಗಿನ್, ಆಂಟಿ ಬಯೋಟೆಕ್ಸ್ ಗಳು, ಲಸಿಕೆಗಳು ಕ್ಯಾನ್ಸರ್ ಗೆ ನೀಡುವ ಔಷಧ ಮತ್ತು ಇತರೆ ಕೆಲವು ಮಹತ್ವದ ಔಷಧಗಳು ಕಡಿಮೆ ದರದಲ್ಲಿ ಸಿಗಲಿದೆ.