ಕೊರೊನಾ ಸೋಂಕು ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಕೂಡ ದೇಶದ ಜನತೆ ನೆಮ್ಮದಿ ಕಳೆದುಕೊಂಡಿರೋದಂತೂ ಸತ್ಯ. ಅದರಲ್ಲೂ ನೌಕರರಿಗೆ ಒಂದು ಕಡೆ ಆರೋಗ್ಯದ ಕಡೆ ಗಮನ ಹರಿಸಿದರೆ, ಮತ್ತೊಂದೆಡೆ ಸೋಂಕು ತಗುಲಿದರೆ ಚಿಕಿತ್ಸಾ ವೆಚ್ಚ ಹೇಗೆ ಎಂಬ ಅನೇಕ ಚಿಂತೆಗಳು ಅವರನ್ನು ನಿದ್ದೆಗೆಡಿಸಿರೋದಂತೂ ಸತ್ಯ. ಆದರೆ ಇದೀಗ ನೌಕರರಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದೆ ಇಎಸ್‌ಐಸಿ.
ಹೌದು, ಉದ್ಯೋಗಿಗಳು ರಾಜ್ಯ ವಿಮಾ ನಿಗಮದ ಸದಸ್ಯರಾಗಿದ್ದರೆ ಅಂತವರಿಗೆ ಈ ಸೌಲಭ್ಯ ಸಿಗಲಿದೆ. ಇನ್ನೊಂದು ವಿಶೇಷ ಅಂದರೆ ಪ್ರತಿ ತಿಂಗಳು ಈ ವಿಮಾ ಸೌಲಭ್ಯಗಳನ್ನು ನೀವು ಪಡೆಯಬಹುದಾಗಿದೆ. ಇಎಸ್‌ಐಸಿ ಸದಸ್ಯರು ವಿಮೆಯನ್ನು ಮಾಡಿಸಿದ್ದರೆ ಅಂತವರಿಗೆ ಹಾಗೂ ಅಂತಹ ಕುಟುಂಬಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.
ಇದನ್ನು ವಿಮೆ ಮಾಡಿಸಿದ ಸದಸ್ಯರಿಗೆ ಪ್ರತಿ ತಿಂಗಳು ನೀಡುವಂತೆ ತನ್ನ ಎಲ್ಲಾ ಪ್ರಾದೇಶಿಕ ಕಚೇರಿಗಳಿಗೆ ಇಎಸ್‌ಐಸಿ ಹೇಳಿದೆ. ಈ ಯೋಜನೆಯಿಂದ ಸಾಕಷ್ಟು ಕುಟುಂಬಗಳಿಗೆ ಅನುಕೂಲ ಆಗುತ್ತದೆ. ಹಾಗೆಯೇ ಕೊರೊನಾ ಸಮಯದಲ್ಲಿ ಇಂತಹದೊಂದು ಯೋಜನೆ ಜಾರಿಗೆ ತರುತ್ತಿರುವುದು ತುಂಬಾ ಉಪಯುಕ್ತವಾಗಿದೆ.