ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಲಕ್ಷಾಂತರ ಪಿಎಫ್ ಚಂದಾದಾರರಿಗೆ ಹಲವು ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರಿಂದಾಗಿ ಪಿಎಫ್ ಖಾತೆಯನ್ನು ಸುಗಮವಾಗಿ ನಿರ್ವಹಿಸಲು ಖಾತೆದಾರರಿಗೆ ಸುಲಭವಾಗುತ್ತದೆ.
ಕುಂದುಕೊರತೆ ಮತ್ತು ದೂರುಗಳಿಗೆ ವಾಟ್ಸಾಪ್ ಮೂಲಕವೂ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪಿಎಫ್ ಚಂದಾದಾರರಿಗೆ ಮತ್ತಷ್ಟು ಅನುಕೂಲತೆ ಕಲ್ಪಿಸುವ ಉದ್ದೇಶದಿಂದ EPFO ವಾಟ್ಸಾಪ್ ಸೇವೆಯನ್ನು ಸಹ ಆರಂಭಿಸಿದ್ದು, ಇದನ್ನು ಬಳಸಿಕೊಂಡು ಪಿಎಫ್ ಖಾತೆದಾರರು ತಮ್ಮ ಖಾತೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ವಾಟ್ಸಾಪ್ ಸಹಾಯವಾಣಿ ಸೇವೆ ಕೂಡ ಇದೆ. ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿಯೂ ವಾಟ್ಸಾಪ್ ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಯಾವುದೇ ಸದಸ್ಯರು ವಾಟ್ಸಾಪ್ ಸಂದೇಶದ ಮೂಲಕ ದೂರು ನೀಡಬಹುದು.
ನಿಮ್ಮ ಪ್ರದೇಶದ ಕಚೇರಿ ವಾಟ್ಸಪ್ ಸಂಖ್ಯೆಯನ್ನು ತಿಳಿಯಲು ಖಾತೆದಾರರ https://www.epfindia.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿದೆ. ಇಪಿಎಫ್ಒ ಖಾತೆದಾರರ ಅನುಕೂಲಕ್ಕಾಗಿ 24 ಗಂಟೆಗಳ ಕಾಲ್ ಸೆಂಟರ್, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್, ಆನ್ಲೈನ್ ದೂರು ಪರಿಹಾರ ಪೋರ್ಟಲ್ ಸೌಲಭ್ಯ ಕಲ್ಪಿಸಿದೆ.