ನವದೆಹಲಿ: ಪಿಎಫ್ -ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಇಂದು ಕೊನೆಯ ದಿನವಾಗಿದೆ. ಆಗಸ್ಟ್ 31 ರೊಳಗೆ EPFO ನೀಡುವ ಯುಎಎನ್ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಿದೆ. ಇಲ್ಲವಾದಲ್ಲಿ ಉದ್ಯೋಗದಾತರು ಅಥವಾ ಕಂಪನಿ ನೀಡುವ ಮಾಸಿಕ ಇಪಿಎಫ್ ಮೊತ್ತ ಖಾತೆಗೆ ಜಮಾ ಆಗುವುದಿಲ್ಲವೆಂದು ಹೇಳಲಾಗಿದೆ.
ಯುಎಎನ್ ಜೊತೆಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಉದ್ಯೋಗದಾತರಿಗೆ ಉದ್ಯೋಗಿಗಳ ರಿಟರ್ನ್ ಚಲನ್ ಭರ್ತಿ ಮಾಡಿ ಉದ್ಯೋಗಿಗಳ ಖಾತೆಗೆ ಹಣ ನೀಡಲು ಸಾಧ್ಯವಾಗಲಿದೆ.
ಇಪಿಎಫ್ ಖಾತೆದಾರರು ಆಧಾರ್ ಕಾರ್ಡ್ ಸಂಖ್ಯೆ ನಮೂದಿಸುವ ಮೂಲಕ ತಮ್ಮ ಗುರುತನ್ನು ದೃಢಪಡಿಸಬೇಕು ನಂತರದಲ್ಲಿ ಪಿಂಚಣಿ, ಗ್ರಾಚ್ಯುಯಿಟಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ. ಯುಎಎನ್ -ಆಧಾರ್ ಲಿಂಕ್ ಆಗದಿದ್ದರೆ ಉದ್ಯೋಗದಾತರು ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.
ಮೊದಲಿಗೆ ಇಪಿಎಫ್ಒ ವೆಬ್ಸೈಟ್ https://unfiedportal-mem.epfindia.gov.in/member interface/ ಓಪನ್ ಮಾಡಿ. ಯುಎಎನ್ ಮತ್ತು ಪಾಸ್ವರ್ಡ್ ಕ್ಲಿಕ್ ಮಾಡಿ ಲಾಗ್ ಇನ್ ಆಗಿ ಮ್ಯಾನೇಜ್ ಟ್ಯಾಬ್ ಅಡಿಯಲ್ಲಿರುವ ಕೆವೈಸಿ ಆಯ್ಕೆ ಮಾಡಿ. ವೇರಿಫೈಡ್ ಡಾಕ್ಯುಮೆಂಟ್ ನಲ್ಲಿ ಆಧಾರ್ ಸಂಖ್ಯೆ ಕಂಡರೆ ಯುಎಎನ್ -ಆಧಾರ್ ಲಿಂಕ್ ಆಗಿದೆ ಎಂದರ್ಥ. ಕಾಣಿಸದಿದ್ದರೆ ನೀವು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕಿದೆ.
EPFO ಚಂದಾದಾರರು ಸೇವಾ ವೆಬ್ ಪೋರ್ಟಲ್, ಉಮಾಂಗ್ ಆಪ್, ಇಪಿಎಫ್ಒ ಪೋರ್ಟಲ್ ನಲ್ಲಿ ಇ –ಕೆವೈಸಿ ಮೂಲಕವೂ ಆಧಾರ್ ಜೋಡಣೆ ಮಾಡಬಹುದು. https://iwu.epfindia.gov.in/eKYC/; ಲಾಗಿನ್ ಆಗಿ ಇವತ್ತೇ ಆಧಾರ್ ಸಂಖ್ಯೆ ಜೋಡಣೆ ಮಾಡಿ.