ಕಾರ್ಮಿಕರ ಭವಿಷ್ಯ ನಿಧಿಯ ಪಿಂಚಣಿ ಹಣದ ಪ್ರಮಾಣವನ್ನು ಇಪಿಎಫ್‌ಓ ಏರಿಕೆ ಮಾಡಿದ್ದು, ಕಾರ್ಮಿಕದ ಠೇವಣಿ ಆಧರಿತ ವಿಮೆ (ಇಡಿಎಲ್‌ಐ) ಯೋಜನೆಯ ಫಲಾನುಭವಿಗಳು ಕೋವಿಡ್-19 ಸಾಂಕ್ರಮಿಕದ ನಡುವೆ ಈ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ.
ಪಿಂಚಣಿದಾರರ ಸಾವಿಗೆ ಕೊಡುವ ವಿಮಾ ಮೊತ್ತದಲ್ಲಿ 2.5 ಲಕ್ಷ ರೂ.ಗಳಷ್ಟು ಏರಿಕೆ ಮಾಡಿರುವ ಇಪಿಎಫ್‌ಓ, ಇತರೆ ಅನುಕೂಲಗಳನ್ನು ಗರಿಷ್ಠ ಏಳು ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಈ ಹಿಂದೆ ಮೇಲ್ಕಂಡ ಅನುಕೂಲಗಳ ಗರಿಷ್ಠ ಮಿತಿಯು ಕ್ರಮವಾಗಿ ಎರಡು ಲಕ್ಷ ರೂ. ಹಾಗೂ ಆರು ಲಕ್ಷ ರೂ.ಗಳು ಇದ್ದವು.
ಕೋವಿಡ್ ಸಂಕಷ್ಟ: ‘ಅನ್ನಭಾಗ್ಯ ಯೋಜನೆ’ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್
ಇಪಿಎಫ್ & ಎಂಪಿ ಕಾಯಿದೆಯ 17ನೇ ವಿಧಿಯ ಷರತ್ತುಗಳಿಗೆ ಹೊರತಾಗಿರುವ ಪಿಂಚಣಿದಾರರಿಗೆ ಈ ಯೋಜನೆಯ ವ್ಯಾಪ್ತಿ ಅನ್ವಯಿಸುತ್ತದೆ ಎಂದು ಇಪಿಎಫ್‌ಓ ತನ್ನ ಗೆಜೆಟ್‌ನಲ್ಲಿ ತಿಳಿಸಿದೆ. ಸಂಬಂಧಪಟ್ಟ ಪಿಂಚಣಿದಾರರು ಮೃತಪಟ್ಟ ದಿನದ ಹಿಂದಿನ 12 ತಿಂಗಳ ಅವಧಿಗೆ ಅವರು ಉದ್ಯೋಗದಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಪಿಂಚಣಿದಾರರು ಕೆಲಸ ಮಾಡುವ ಸಂಸ್ಥೆ ಬದಲಿಸಿದ್ದರೂ ಪರವಾಗಿಲ್ಲ. ಮೇಲ್ಕಂಡ ಅನುಕೂಲಗಳು ಗೆಜೆಟ್ ಪ್ರಕಟವಾದ ಮೂರು ವರ್ಷಗಳ ಅವಧಿಗೆ ಪ್ರಭಾವದಲ್ಲಿರುತ್ತವೆ ಎಂದು ಇಪಿಎಫ್‌ಓ ತಿಳಿಸಿದೆ.