ನವದೆಹಲಿ: EPF ನಿವೃತ್ತಿ ಯೋಜನೆ ವೇತನ ಮಿತಿ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ. ನಿವೃತ್ತಿ ಉಳಿತಾಯ ಯೋಜನೆಗಾಗಿ ವೇತನ ಮಿತಿ ಹೆಚ್ಚಳ ಮಾಡಲು ಚಿಂತನೆ ನಡೆದಿದ್ದು, ಇದರಿಂದ EPF ಗೆ ಕಡ್ಡಾಯವಾಗಿ ನೀಡಬೇಕಿರುವ ವಂತಿಗೆ ಮೊತ್ತದಲ್ಲಿ ಹೆಚ್ಚಳವಾಗಲಿದೆ.
ಕಾರ್ಮಿಕರ ಉಳಿತಾಯದಲ್ಲಿ ಏರಿಕೆಯಾಗಿ ನಿವೃತ್ತಿಯ ನಂತರ ಲಾಭ ಸಿಗಲಿದೆ. ಹೊಸ ಯೋಜನೆಯಿಂದ ಇಪಿಎಫ್ ಭದ್ರತಾ ಯೋಜನೆಗೆ ಮತ್ತಷ್ಟು ಕಾರ್ಮಿಕರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಸರ್ಕಾರ ಶೀಘ್ರದಲ್ಲೇ ವೇತನ ಗರಿಷ್ಠ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚನೆ ಮಾಡಲಿದ್ದು, ಹಣದುಬ್ಬರ ಹೆಚ್ಚಳ ಮತ್ತು ಇಪಿಎಫ್ ನಿಯಮಿತವಾಗಿ ವೇತನ ಪರಿಷ್ಕರಣೆ ಅಧ್ಯಯನ ಮಾಡಿ ವೇತನ ಮಿತಿ ಹೆಚ್ಚಳದ ಬಗ್ಗೆ ಈ ಸಮಿತಿ ಶಿಫಾರಸು ಮಾಡಲಿದೆ. ವೇತನದ ಗರಿಷ್ಠ ಮಿತಿಯನ್ನು ತಿಂಗಳಿಗೆ 21,000 ರೂ.ಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.
ವೇತನ ಮಿತಿ ಏರಿಕೆ ಮಾಡುವುದರಿಂದ 15,000 ರೂ.ಗಿಂತ ಕಡಿಮೆ ವೇತನ ಹೊಂದಿದವರು ಇಪಿಎಫ್ ಕಡ್ಡಾಯವಾಗಿ ಚಂದದಾರರಾಗುತ್ತಾರೆ. ಪಿಎಫ್ಒ ವಂತಿಗೆಯನ್ನು ಉದ್ಯೋಗಿಗಳು ಕಡ್ಡಾಯದ ಮಿತಿಗಿಂತ ಹೆಚ್ಚುವರಿಗಾಗಿ ಪಾವತಿಸಬಹುದು. ಉದ್ಯೋಗದಾತರು ಇದನ್ನು ಪಾಲಿಸಬೇಕೆಂಬುದು ಕಡ್ಡಾಯವಲ್ಲ. ಪ್ರಸ್ತುತ ಇಪಿಎಫ್ ಯೋಜನೆಯಲ್ಲಿ ಮಾಸಿಕ 15,000 ರೂ. ಮೂಲವೇತನ ಇರುವವರು ಚಂದದಾರರಾಗಿದ್ದಾರೆ.
2014 ರವರೆಗೂ 6500 ರೂ. ಇದ್ದು, 20 ಕಾರ್ಮಿಕರಿಗಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಇಪಿಎಫ್ ಯೋಜನೆಗೆ ಒಳಪಡುವುದು ಕಡ್ಡಾಯವಾಗಿದೆ. ನಿವೃತ್ತಿ ಉಳಿತಾಯ ಯೋಜನೆಗಾಗಿ ವೇತನ ಮಿತಿ ಹೆಚ್ಚಳ ಮಾಡಲು ಚಿಂತನೆ ನಡೆದಿದ್ದು, ಇದರಿಂದ EPF ಗೆ ಕಡ್ಡಾಯವಾಗಿ ನೀಡಬೇಕಿರುವ ವಂತಿಗೆ ಮೊತ್ತದಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದೆ.