ನವದೆಹಲಿ: ಇಪಿಎಫ್ಒ ಪಿಂಚಣಿ ಖಾತೆ ಹೊಂದಿರುವ ಕೋಟ್ಯಂತರ ಜನರ ಡೇಟಾ ಬೇಸ್ ನಲ್ಲಿರುವ 28 ಕೋಟಿಗೂ ದಾಖಲೆಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿವೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಪಿಂಚಣಿ ಖಾತೆ ಹೊಂದಿದವರ ಆಧಾರ್ ಕಾರ್ಡ್ ಸಂಖ್ಯೆ, ಪಿಂಚಣಿದಾರರ ಹೆಸರು, ಅಡ್ರೆಸ್, ಯುಎಎನ್ ಸಂಖ್ಯೆ, IFSC ಕೋಡ್, ಉದ್ಯೋಗಿಗಳ ವಿವರ, ಇನ್ ಕಂ ಸ್ಲ್ಯಾಬ್ ಸೇರಿ ವಿವಿಧ 28 ಕೋಟಿ ದಾಖಲೆಗಳು ಸೋರಿಕೆಯಾಗಿರುವ ಬಗ್ಗೆ ಉಕ್ರೇನ್ ಮೂಲದ ಪತ್ರಕರ್ತ, ಭದ್ರತಾ ಸಂಶೋಧಕ ಬಾಬ್ ಡಿಯಾಂಕೊ ತಿಳಿಸಿದ್ದಾರೆ.
ಪಿಂಚಣಿ ಖಾತೆದಾರರ ಹೆಸರು, ನಾಮಿನಿದಾರರ ಮಾಹಿತಿ, ಖಾತೆದಾರರ ಯುಎನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಮೊದಲಾದ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಅವರು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದಾರೆ. ಸೆಕ್ಯೂರಿಟಿ ಡಿಸ್ಕವರ್ ಡಾಟ್ ಕಾಂ ಸಂಸ್ಥಾಪಕರಾಗಿರುವ ಬಾಬ್ ಡಿಯಾಂಕೊ ಆಗಸ್ಟ್ 2 ರಂದೇ ಮಾಹಿತಿ ಸೋರಿಕೆಯಾದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಇಪಿಎಫ್ಒ ಗಮನ ಸೆಳೆದಿದ್ದರು. ಐಪಿಯೊಂದರಿಂದ 28.04 ಕೋಟಿ, ಮತ್ತೊಂದು ಐಪಿಯಿಂದ 8.39 ಲಕ್ಷ ದಾಖಲೆಗಳು ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.