ನವದೆಹಲಿ: ಇದೇ ಡಿಸೆಂಬರ್ ಅಂತ್ಯದೊಳಗೆ ಇಪಿಎಫ್ಒ ಚಂದಾದಾರರಿಗೆ ಶೇಕಡ 8.5 ರಷ್ಟು ಬಡ್ಡಿಯನ್ನು ಜಮಾ ಮಾಡುವ ಸಾಧ್ಯತೆ ಇದೆ. ಇದರಿಂದ 6 ಕೋಟಿ ಚಂದಾದಾರರಿಗೆ ಪ್ರಯೋಜನ ಸಿಗಲಿದೆ.
2019 -20 ನೇ ಸಾಲಿನ ಇಪಿಎಫ್ ಗೆ ಶೇಕಡ 8.5 ರಷ್ಟು ಬಡ್ಡಿ ದರವನ್ನು ಪಾವತಿಸುವ ಕುರಿತಾಗಿ ಕಾರ್ಮಿಕ ಸಚಿವಾಲಯದಿಂದ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 2019 – 20 ನೇ ಸಾಲಿನ ಶೇಕಡ 8.5 ರಷ್ಟು ಬಡ್ಡಿ ದರವನ್ನು 6 ಕೋಟಿ ಚಂದಾದಾರ ನೌಕರರ ಭವಿಷ್ಯ ನಿಧಿಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತತ್ವದಲ್ಲಿ ಸೆಪ್ಟಂಬರ್ ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಟ್ರಸ್ಟಿಗಳ ಸಭೆಯಲ್ಲಿ ಶೇಕಡ 8.5 ರಷ್ಟು ಬಡ್ಡಿಯನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಲಾಗಿತ್ತು. ಮೊದಲ ಕಂತಿನಲ್ಲಿ ಶೇಕಡ 8.15 ರಷ್ಟು, 2 ನೇ ಕಂತಿನಲ್ಲಿ ಶೇಕಡ 0.35 ರಷ್ಟು ಬಡ್ಡಿ ದರ ಪಾವತಿಸಲಾಗುವುದು. ಕೆಲವೇ ದಿನದಲ್ಲೇ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಲಿದ್ದು, ಈ ತಿಂಗಳೊಳಗೆ ಬಡ್ಡಿ ಜಮಾ ಮಾಡಲಾಗುವುದು ಎನ್ನಲಾಗಿದೆ.