
ನವದೆಹಲಿ: EPFO ಮಾಜಿ ಸದಸ್ಯರಿಗೆ ಮಾಸಿಕ ಕನಿಷ್ಠ 500 ರೂಪಾಯಿ ದೇಣಿಗೆ ಪಡೆದು ಚಂದಾದಾರಿಕೆ ಮುಂದುವರಿಸುವ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ.
ನೌಕರರು ಕೆಲಸ ತೊರೆದ ನಂತರ ಸೌಲಭ್ಯ ನಿಂತುಹೋಗುವ ಕುರಿತಂತೆ ಇನ್ನು ಮುಂದೆ ಆತಂಕಪಡುವ ಅಗತ್ಯವಿಲ್ಲ. EPFO ಮಾಜಿ ಸದಸ್ಯರಿಗೆ ಚಂದಾದಾರಿಕೆಯನ್ನು ಮುಂದುವರೆಸುವ ಅವಕಾಶ ನೀಡುವ ಸಾಧ್ಯತೆ ಇದೆ.
ಉದ್ಯೋಗ ಕಳೆದುಕೊಂಡವರಿಗೆ ಮತ್ತು ಅನೌಪಚಾರಿಕ ವಲಯಕ್ಕೆ ಬದಲಾದವರಿಗೆ EPFO ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುವಂತೆ ಕನಿಷ್ಠ 500 ರೂಪಾಯಿ ದೇಣಿಗೆ ಪಡೆದು ಚಂದಾದಾರಿಕೆ ಮುಂದುವರಿಸಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಉದ್ಯೋಗ ತೊರೆದ ನಂತರವೂ ಚಂದಾದಾರಿಕೆ ಮುಂದುವರೆಸಿ ಇಪಿಎಫ್ ಸೌಲಭ್ಯ ಪಡೆಯುವ ಅವಕಾಶ ಕಲ್ಪಿಸಿದರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.