ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ ಇಪಿಎಫ್ಒ 2020 -23ನೇ ಸಾಲಿನ ಹಣಕಾಸು ವರ್ಷಕ್ಕೆ ನೌಕರರ ಪಿಎಫ್ ಠೇವಣಿಗಳಿಗೆ ಬಡ್ಡಿ ದರವನ್ನು ಶೇಕಡ 8.15ಕ್ಕೆ ಹೆಚ್ಚಳ ಮಾಡಿದೆ.
2021 – 22 ನೇ ಸಾಲಿಗೆ ಇಪಿಎಫ್ ಠೇವಣಿಗಳಿಗೆ ಶೇಕಡ 8.1 ರಷ್ಟು ಬಡ್ಡಿ ದರ ನಿಗದಿ ಮಾಡಲಾಗಿತ್ತು. 2020 – 21 ರಲ್ಲಿ ಶೇಕಡ 8.5 ರಷ್ಟು ಬಡ್ಡಿ ನೀಡಲಾಗಿತ್ತು. ಕೇಂದ್ರ ಕಾರ್ಮಿಕ ಸಚಿವ ಭೂಪೆಂದ್ರ ಯಾದವ್ ನೇತೃತ್ವದ ಇಪಿಎಫ್ ಮಂಡಳಿ 2022 -23ನೇ ಸಾಲಿಗೆ 8.15 ರಷ್ಟು ಬಡ್ಡಿ ನೀಡುವಂತೆ ಶಿಫಾರಸು ಮಾಡಿರುವುದಾಗಿ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ. ಪರಿಷ್ಕೃತ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ ಬಳಿಕ ಅಧಿಕೃತವಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.