ನವದೆಹಲಿ: 2020 -21 ನೇ ಸಾಲಿಗೆ ಇಪಿಎಫ್ ಗ್ರಾಹಕರಿಗೆ ಶೇಕಡಾ 8.5 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಮೂಲಕ ಹೊಸ ವರ್ಷದ ಆರಂಭಕ್ಕೆ ಮೊದಲೇ ಇಪಿಎಫ್ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ 2020 -21 ನೇ ಸಾಲಿನಲ್ಲಿ ಶೇಕಡ 8.5 ರಷ್ಟು ಬಡ್ಡಿ ನೀಡುವ ಪ್ರಕ್ರಿಯೆ ಆರಂಭಿಸಿದೆ. 22.55 ಕೋಟಿ ಗ್ರಾಹಕರ ಖಾತೆಗಳಿಗೆ ಬಡ್ಡಿ ಹಣ ಜಮಾ ಮಾಡಲಾಗಿದೆ ಎಂದು EPFO ಮಾಹಿತಿ ನೀಡಿದೆ.
ಕೇಂದ್ರ ಹಣಕಾಸು ಮಂತ್ರಾಲಯ ಕಳೆದ ನವೆಂಬರ್ ನಲ್ಲಿ 2020 -21ನೇ ಇಪಿಎಫ್ ಠೇವಣಿ ಮೇಲೆ ಶೇಕಡ 8.5 ರಷ್ಟು ಬಡ್ಡಿ ದರ ನೀಡುವುದನ್ನು ಅನುಮೋದಿಸಿದ್ದಲ್ಲದೇ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು.