ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಮುಖ ಉದ್ಯೋಗದಾತರಿಗೆ ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ನೋಡಲು ನೆರವಾಗಲಿದೆ. ಇಪಿಎಫ್‌ಒ ಟ್ವಿಟರ್ ನಲ್ಲಿ ಈ ವಿಷ್ಯವನ್ನು ತಿಳಿಸಿದೆ. ಪ್ರಮುಖ ಉದ್ಯೋಗದಾತರು ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ಪರಿಶೀಲಿಸಲು ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಲಾಗಿದೆ ಎಂದು ಇಪಿಎಫ್ಒ ಹೇಳಿದೆ.
ಮಾಹಿತಿಯ ಪ್ರಕಾರ, ಗುತ್ತಿಗೆದಾರರ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿರುವ ಇಪಿಎಫ್‌ಒ ನೋಂದಾಯಿತ ಉದ್ಯೋಗದಾತರು, ಇಪಿಎಫ್‌ಒನ ಇಂಟಿಗ್ರೇಟೆಡ್ ಪೋರ್ಟಲ್‌ನಲ್ಲಿ ಗುತ್ತಿಗೆದಾರರು ಮತ್ತು ಗುತ್ತಿಗೆ ನೌಕರರ ವಿವರಗಳನ್ನು ಸೇರಿಸಬಹುದು. unifiedportal-emp.epfindia.gov.in/epfo/ ನಲ್ಲಿ ವಿವರಣೆಯನ್ನು ಪಡೆಯಬಹುದು.
ಇಪಿಎಫ್‌ಒನಲ್ಲಿ ನೋಂದಾಯಿಸದ ಪ್ರಧಾನ ಉದ್ಯೋಗದಾತರು, ತಮ್ಮ ಗುತ್ತಿಗೆದಾರರು ಮತ್ತು ಗುತ್ತಿಗೆ ನೌಕರರ ವಿವರಗಳನ್ನು ಸೇರಿಸಲು ಲಾಗಿನ್, ಪಾಸ್‌ವರ್ಡ್ ಪಡೆಯಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಕಾರ್ಖಾನೆಯ ಮಾಲೀಕರು ಅಥವಾ ಉದ್ಯೋಗಿ ಅಥವಾ ವ್ಯವಸ್ಥಾಪಕರು ಪ್ರಧಾನ ಉದ್ಯೋಗದಾತರಾಗಿರುತ್ತಾರೆ. ಇಸಿಆರ್ ಅನ್ನು ಏಪ್ರಿಲ್ 2012 ರಲ್ಲಿ ಪರಿಚಯಿಸಲಾಯಿತು. ಇದರಿಂದಾಗಿ ಉದ್ಯೋಗದಾತರು ಆನ್‌ಲೈನ್ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ.