ನವದೆಹಲಿ: ಕೋವಿಡ್ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ.
ಹಣ ವಾಪಸಾತಿ ಹಕ್ಕುಗಳ ಅರ್ಜಿಯನ್ನು ಇಪಿಎಫ್ಒ ಆದ್ಯತೆಯ ಮೇರೆಗೆ ಇತ್ಯರ್ಥಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕ್ಲೈಮ್ ಗಳಿಗಾಗಿ ಅರ್ಜಿ ಸಲ್ಲಿಸಿದ್ದು ಇದುವರೆಗೆ ಇತ್ಯರ್ಥವಾಗದೇ ಇದ್ದರೆ ತ್ವರಿತ ಇತ್ಯರ್ಥಕ್ಕೆ ಕೋವಿಡ್ 19 ಸಂಬಂಧಿತ ಹಕ್ಕುಗಳ ಪ್ರಕ್ರಿಯೆಯನ್ನು ಬಳಸಿಕೊಳ್ಳಬಹುದಾಗಿದೆ ಎನ್ನಲಾಗಿದೆ.
ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು 72 ಗಂಟೆಗಳ ಒಳಗೆ ಆನ್ಲೈನ್ ಇಪಿಎಫ್ ವಾಪಸಾತಿ ಹಕ್ಕುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಯಾವುದೇ ಮುಂಗಡ ಬಾಕಿ ಇರುವಾಗ ಕೋವಿಡ್-19 ಹಕ್ಕು ಪಡೆಯಲು ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸುವುದು. ಸಂಪೂರ್ಣವಾಗಿ ಕೆವೈಸಿ ಕಂಪ್ಲೇಂಟ್ ಇಲ್ಲದ ಕ್ಲೇಮುಗಳಿಗೆ ಸಮಯ ಬೇಕಾಗುತ್ತದೆ. 3 ದಿನದಲ್ಲಿ ಕ್ಲೈಂ ಗಳನ್ನು ಪೂರ್ಣಗೊಳಿಸಿದ ನಂತರ ವಾಪಸಾತಿ ಮೊತ್ತವನ್ನು ಜಮಾ ಮಾಡಲು ಇಪಿಎಫ್ಒ, ಬ್ಯಾಂಕಿಗೆ ಚೆಕ್ ಕಳುಹಿಸುತ್ತದೆ. ಬ್ಯಾಂಕುಗಳು ಚಂದಾದಾರರ ಖಾತೆಯಲ್ಲಿ ಹಣವನ್ನು ಠೇವಣಿ ಇಡಲಿದ್ದು, 1 ರಿಂದ 3 ದಿನಗಳ ಅವಧಿಯಲ್ಲಿ ಹಣ ಪಡೆಯಬಹುದಾಗಿದೆ.
ಮನೆ ನಿರ್ಮಾಣ, ನಿರುದ್ಯೋಗ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತು, ಉನ್ನತ ಶಿಕ್ಷಣ ಮೊದಲಾದ ಕಾರಣಗಳಿಗೆ ಹಣ ಪಡೆಯಬಹುದು. ಕೊರೋನಾ ಅಡಿಯಲ್ಲಿಯೂ ಹಣ ಪಡೆಯುವ ಸೌಲಭ್ಯವನ್ನು ಎಲ್ಲಾ ಚಂದಾದಾರರಿಗೆ ನೀಡಲಾಗಿದೆ.
ಶೇಕಡ 75 ರಷ್ಟು ಭವಿಷ್ಯನಿಧಿ ಬಾಕಿ(ನೌಕರರು ಮತ್ತು ಉದ್ಯೋಗದಾತರ ಪಾಲು), ಮೂಲ ವೇತನ ಮತ್ತು ಡಿಎ ಮೂರು ತಿಂಗಳವರೆಗೆ ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು. ಬ್ಯಾಂಕ್ ಖಾತೆಯ ಚೆಕ್ ಸ್ಕ್ಯಾನ್ ಮಾಡಿದ ಫೋಟೋ ಹೊರತುಪಡಿಸಿ ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ.
ಮಾಹಿತಿ: ಮೊದಲಿಗೆ ಚಂದಾದಾರರು ಇಪಿಎಫ್ ನ ಏಕೀಕೃತ ಪೋರ್ಟಲ್ ಗೆ ಲಾಗಿನ್ ಆಗಬೇಕಿದೆ. ಆನ್ಲೈನ್ ಸೇವೆಗಳಿಗೆ ಹೋಗಿ ಫಾರ್ಮ್ ನಂಬರ್ 31 ಆಯ್ಕೆ ಮಾಡಿಕೊಳ್ಳಬೇಕು. ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಿ. ಆನ್ಲೈನ್ ಕ್ಲೈಮ್ ಗಾಗಿ ಮುಂದುವರೆಯಿರಿ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಿಂದ ಉದ್ದೇಶವನ್ನು ಸಾಂಕ್ರಾಮಿಕ ರೋಗ ಕೊರೋನಾ ಎಂದು ಆಯ್ಕೆಮಾಡಿ. ಅಗತ್ಯವಿರುವ ಮೊತ್ತವನ್ನು ನಮೂದಿಸಿ ಮತ್ತು ಸ್ಕ್ಯಾನ್ ಮಾಡಿದ ನಕಲು ಪ್ರತಿಯನ್ನು ಅಪ್ಲೋಡ್ ಮಾಡಿ. ನಿಮ್ಮ ಅಡ್ರೆಸ್ ದಾಖಲಿಸಿರಿ. ಗೆಟ್ ಆಧಾರ್ ಓಟಿಪಿ ಕ್ಲಿಕ್ ಮಾಡಿ. ಆಧಾರ್ ಜೋಡಣೆ ಮಾಡಿದ ಮೊಬೈಲ್ ಫೋನ್ ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಸಬ್ಮಿಟ್ ಕೊಡಿ.