ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಖಾತೆಗಳಿಂದ ಭಾಗಶಃ ಹಣ ಪಡೆದುಕೊಳ್ಳಲು ಮುಂದಾದ ಇಪಿಎಫ್ ಚಂದಾದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಇನ್ನು ಭವಿಷ್ಯನಿಧಿ ಖಾತೆಯಿಂದ ಹಣ ಪಡೆಯಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಜೂನ್ 30ಕ್ಕೆ ಇಪಿಎಫ್ ಸದಸ್ಯರು ತಮ್ಮ ಖಾತೆಗಳಿಂದ ಭಾಗಶಃ ಹಣವನ್ನು ಪಡೆಯುವ ಅವಧಿ ಮುಕ್ತಾಯವಾಗಿದೆ. ಅದನ್ನು ವಿಸ್ತರಣೆ ಮಾಡಿಲ್ಲವೆಂದು ಹೇಳಲಾಗಿದೆ.
ಕೊರೋನಾ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಚಂದಾದಾರರು ಹಣಕಾಸಿನ ಅವಶ್ಯಕತೆಗಾಗಿ ತಮ್ಮ ಖಾತೆಗಳಿಂದ ಹಣ ಪಡೆಯಲು ಅವಕಾಶ ನೀಡಲಾಗಿತ್ತು. ಈ ಮೂಲಕ ಸಂಬಳ ಪಡೆಯುವ ದೊಡ್ಡ ವರ್ಗಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿತ್ತು.
ಹಣಕಾಸಿನ ತುರ್ತು ಸಂದರ್ಭದಲ್ಲಿ ಇಪಿಎಫ್ ಖಾತೆದಾರರು ತಮ್ಮ ಖಾತೆಗಳಿಂದ ಹಣ ಪಡೆದುಕೊಂಡಿದ್ದಾರೆ. ಇನ್ನೂ ಅನೇಕರು ಹಣ ಪಡೆಯಲು ಮುಂದಾಗಿದ್ದಾರೆ. ಆದರೆ ಈ ಅವಧಿ ಜೂನ್ 30ಕ್ಕೆ ಅಂತ್ಯವಾಗಿದೆ. ಇಪಿಎಫ್ ಅಥವಾ ಸರ್ಕಾರದಿಂದ ದಿನಾಂಕ ವಿಸ್ತರಣೆ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲದ ಕಾರಣ ನಿನ್ನೆಗೆ ಹಣ ಪಡೆಯುವ ಅವಕಾಶ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ.