ಬಳ್ಳಾರಿ: ಇಪಿಎಫ್ ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣ ಪತ್ರವನ್ನು ಪಿಎಫ್ ಕಚೇರಿಗೆ ಹೋಗುವುದನ್ನು ತಪ್ಪಿಸಲು ಪಿಂಚಣಿದಾರರ ಸಂಬಂಧಪಟ್ಟ ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಯಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪಿಂಚಣಿದಾರರು ತಮ್ಮ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ, ಪಿಂಚಣಿ ಪಾವತಿಯ ಆದೇಶ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ಆಧಾರ್ ಆಧಾರಿತ ಬಯೋಮೆಟ್ರಿಕ್ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ತಮ್ಮ ಹತ್ತಿರದ ಪೋಸ್ಟ್ ಮಾನ್/ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಸಲ್ಲಿಸಬಹುದು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಇಪಿಎಫ್ ಪಿಂಚಣಿದಾರರು ಈಗ ಶುಲ್ಕವನ್ನು ಪಾವತಿಸಿದ ನಂತರ ಮನೆ ಬಾಗಿಲಿನ ಡಿಎಲ್‌ಸಿ ಸೌಲಭ್ಯವನ್ನು ಕೋರಬಹುದು. ಈ ಸೌಲಭ್ಯವನ್ನು ಪಡೆಯಲು ಪಿಂಚಣಿದಾರರು ಪೋಸ್ಟ್ ಇನ್ಫೋ ಮೊಬೈಲ್ ಆ್ಯಪ್ ಅಥವಾ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧೀಕೃತ ವೆಬ್‌ಸೈಟ್‌ನಲ್ಲಿ ಪಿಂಚಣಿದಾರರು ಮನೆ ಬಾಗಿಲಿನ ಸೇವೆಯನ್ನು ವಿನಂತಿಸಬಹುದು. ಪ್ರಮಾಣ ಪತ್ರವನ್ನು ಪ್ರಮಾಣ್ ಐಡಿಯೊಂದಿಗೆ ತಕ್ಷಣ ನೀಡಲಾಗುತ್ತದೆ ಮತ್ತು ಪಿಂಚಣಿದಾರರ ಮೊಬೈಲ್ ಸಂ. ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ ಎಂದು ಭವಿಷ್ಯನಿಧಿ ಕಚೇರಿಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ.