ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಕೊಡುಗೆ ವಾರ್ಷಿಕ 2.5 ಲಕ್ಷ ರೂಪಾಯಿ ಮೀರಿದಲ್ಲಿ ಅದರ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಏಪ್ರಿಲ್ 1 ರಿಂದ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರಿ ಉದ್ಯೋಗಿಗಳಿಗೆ ಕೂಡ ಈ ನಿಯಮ ಅನ್ವಯವಾಗಲಿದ್ದು, ಅವರಿಗೆ 5 ಲಕ್ಷ ರೂ. ಮಿತಿ ನೀಡುವ ನಿರೀಕ್ಷೆಯಿದೆ. ಏಪ್ರಿಲ್ 1 ರಿಂದ ಇಪಿಎಫ್ ತೆರಿಗೆ ಮುಕ್ತ ದೇಣಿಗೆ ಮತ್ತು ತೆರಿಗೆ ಇರುವ ದೇಣಿಗೆ ಎಂದು ವಿಭಜನೆಯಾಗಲಿದ್ದು, ಇಪಿಎಫ್ ಖಾತೆಗೆ ಉದ್ಯೋಗಿಯ ಕೊಡುಗೆ ಮಾತ್ರ ತೆರಿಗೆ ಪರಿಗಣಿಸಲಾಗುವುದು. 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಪಿಎಫ್ ದೇಣಿಗೆಗೆ ಮಾತ್ರ ತೆರಿಗೆ ಅನ್ವಯವಾಗಲಿದೆ.
ಸರ್ಕಾರೇತರ ವಲಯದ ಉದ್ಯೋಗ ವಾರ್ಷಿಕ 5 ಲಕ್ಷ ರೂಪಾಯಿಗಳನ್ನು ಪಿಎಫ್ ಖಾತೆಗೆ ಜಮಾ ಮಾಡಿದಲ್ಲಿ 2.5 ಲಕ್ಷ ರೂ.ಗೆ ತೆರಿಗೆ ಅನ್ವಯವಾಗಲಿದೆ.