ನವದೆಹಲಿ: ಕೊರೊನಾ ಲಾಕ್ ಡೌನ್ ನಿಂದ ಅತಂತ್ರವಾಗಿದ್ದ ಔದ್ಯೋಗಿಕ ಕ್ಷೇತ್ರ ಡಿಸೆಂಬರ್ ಮೊದಲ ಮೂರು ವಾರಗಳಲ್ಲಿ ಚೇತರಿಕೆ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವಿಶ್ಲೇಷಣೆ, ಆರ್ಥಿಕತೆಯ ಸೂಚ್ಯಂಕ ಈ ಕುರಿತು ಬೆಳಕು ಚೆಲ್ಲಿದೆ.
ಒಟ್ಟು ಉದ್ಯೋಗ ದೊರಕುವ ಪ್ರಮಾಣ, ಉದ್ಯೋಗ ಬೆಳವಣಿಗೆಯ ಸರಾಸರಿ ಹೆಚ್ಚಿದೆ. ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.5 ರಷ್ಟು ಉದ್ಯೋಗ ವೃದ್ಧಿ ಇತ್ತು. ಈಗ ಅದು ಶೇ. 23.9 ರಷ್ಟು ಏರಿಕೆ ಕಂಡಿದೆ.
ಭಾರತ ಸ್ವಾತಂತ್ರ್ಯವಾದ ನಂತರ ಇದೇ ಮೊದಲ ಬಾರಿ ಆರ್ಥಿಕತೆ ಇದ್ದಕ್ಕಿದ್ದಂತೆ ಕುಸಿದಿದೆ. ಚೇತರಿಕೆಗೆ ಒಂದು ವರ್ಷವಾದರೂ ಬೇಕು ಎಂದು ಆರ್ಥಿಕ ತಜ್ಞರು ಲೆಕ್ಕ ಹಾಕಿದ್ದರು. ಆದರೆ, ಈಗ ಡಿಸೆಂಬರ್ 10ರ ಅವಧಿಯಲ್ಲಿ 394 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದೆ.
ಕಳೆದ ವರ್ಷ ಇದೇ ಅವಧಿಗೆ 4 ಕೋಟಿ 5 ಸಾವಿರದಷ್ಟು ಉದ್ಯೋಗ ಕ್ಷೇತ್ರದಲ್ಲಿ ವೃದ್ಧಿ ಇತ್ತು. ಈ ಬಾರಿ ಅದಕ್ಕೆ ಹೋಲಿಸಿದರೆ ಶೇ.2.5 ರಷ್ಟು ಮಾತ್ರ ಕಡಿಮೆ ಇದೆ. “V” ಶೇಪ್ ನಲ್ಲಿ ಚೇತರಿಕೆ ಕಾಣುತ್ತಿದೆ. ರಿಸರ್ವ್ ಬ್ಯಾಂಕ್ ಲೆಕ್ಕಾಚಾರದ ಪ್ರಕಾರ ದೇಶದ ಜಿಡಿಪಿ -9.5 ದಿಂದ -7.5 ಗೆ ಬಂದಿದೆ. ಕೇವಲ ಉದ್ಯೋಗ ಕ್ಷೇತ್ರವಲ್ಲ ಉಳಿದ ಕ್ಷೇತ್ರಗಳಲ್ಲೂ ವೃದ್ಧಿ ಕಂಡಿದೆ.