
ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಶೀಘ್ರವೇ ಖುಷಿ ಸುದ್ದಿಯೊಂದನ್ನು ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸರ್ಕಾರ, ವೇತನ 21 ಸಾವಿರಕ್ಕಿಂತ ಹೆಚ್ಚಿರುವ ನೌಕರರಿಗೂ ಇ.ಎಸ್.ಐ.ಸಿ. ಲಾಭ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಕೊರೊನಾ ಸಂದರ್ಭದಲ್ಲಿ ಜನರಿಗೆ ಹೆಚ್ಚು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸರ್ಕಾರ ಇ.ಎಸ್.ಐ.ಸಿ. ನಿಯಮಗಳಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. 21 ಸಾವಿರದಿಂದ 30 ಸಾವಿರದವರೆಗೆ ಸಂಬಳ ಪಡೆಯುವ ನೌಕರರಿಗೆ ಇ.ಎಸ್.ಐ.ಸಿ. ಸೌಲಭ್ಯ ನೀಡಲು ಸರ್ಕಾರ ಆಲೋಚನೆ ಮಾಡ್ತಿದೆ.
ಕಾರ್ಮಿಕ ಸಚಿವಾಲಯ ನಿಯಮಗಳ ಬದಲಾವಣೆಗೆ ತಯಾರಿ ನಡೆಸಿದೆ. ಈ ಪ್ರಸ್ತಾವನೆಯನ್ನು ಶೀಘ್ರವೇ ಐ.ಎಸ್.ಐ.ಸಿ. ಮಂಡಳಿಗೆ ಕಳುಹಿಸಲಿದೆ.