ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಪಿಎಫ್ ಖಾತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ನೌಕರಿ ಬದಲಿಸುತ್ತಿದ್ದಂತೆ ಜನರು ಪಿಎಫ್ ಖಾತೆಯನ್ನು ಖಾಲಿ ಮಾಡ್ತಾರೆ. ಆದ್ರೆ ಇದ್ರಿಂದ ನಿಮಗೇ ನಷ್ಟವಾಗುತ್ತದೆ. ಸರ್ಕಾರ ಪಿಎಫ್ ಗೆ ಹೆಚ್ಚಿನ ಬಡ್ಡಿ ನೀಡುತ್ತದೆ. ನೌಕರಿ ಬಿಟ್ಟ ತಕ್ಷಣ ಪಿಎಫ್ ನಲ್ಲಿರುವ ಹಣ ಹಿಂಪಡೆಯಬಾರದು.
ಇಪಿಎಫ್ಒ ಪ್ರಕಾರ, ಯಾವುದೇ ಉದ್ಯೋಗಿಯು ಉದ್ಯೋಗವನ್ನು ಬದಲಿಸಿದ ತಕ್ಷಣ ಪಿಎಫ್ ಖಾತೆಯನ್ನು ಖಾಲಿ ಮಾಡಬಾರದು. ಕೆಲಸ ಬಿಟ್ಟ ತಕ್ಷಣ ಪಿಎಫ್ ಖಾತೆಗೆ ಬಡ್ಡಿ ಜಮಾ ಆಗುವುದಿಲ್ಲವೆಂದು ಭಾವಿಸುತ್ತಾರೆ. ಅದೇ ಕಾರಣಕ್ಕೆ ಪಿಎಫ್ ಖಾತೆ ಖಾಲಿ ಮಾಡುತ್ತಾರೆ. ನಿಯಮಗಳ ಪ್ರಕಾರ, ಕೆಲಸ ಬಿಟ್ಟ ನಂತ್ರವೂ ಬಡ್ಡಿ ಖಾತೆಗೆ ಜಮಾ ಆಗ್ತಿರುತ್ತದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ ಸಕ್ರಿಯವಲ್ಲದ ಖಾತೆಗಳಿಗೆ ಸಹ 3 ವರ್ಷಗಳವರೆಗೆ ಬಡ್ಡಿಯನ್ನು ಪಾವತಿಸುತ್ತದೆ. ಉದ್ಯೋಗಿ ಕೆಲಸ ಬಿಟ್ಟ ತಕ್ಷಣ ಹಣ ವಿತ್ ಡ್ರಾ ಮಾಡದಿದ್ದರೆ ಇಪಿಎಫ್ಒ ಮೂರು ವರ್ಷಗಳ ಕಾಲ ಅದಕ್ಕೆ ಬಡ್ಡಿ ಪಾವತಿಸುತ್ತದೆ. ಹಾಗೆ ಕೆಲಸ ಬದಲಿಸಿದ್ರೆ ಪಿಎಫ್ ಖಾತೆಯನ್ನು ಖಾಲಿ ಮಾಡಬಾರದು. ಕೆಲಸವನ್ನು ಬದಲಾಯಿಸಿದಾಗ ಹೊಸ ಕಂಪನಿಗೂ ಹಳೆ ಕಂಪನಿ ಪಿಎಫ್ ಖಾತೆ ನಂಬರ್ ನೀಡಬೇಕು.