ನವದೆಹಲಿ: ಬಡ್ಡಿ ದರ ಇಳಿಕೆಯಾಗಿ ಇಎಂಐ ಹೊರೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಸದ್ಯಕ್ಕೆ ಬಡ್ಡಿ ದರ ಇಳಿಕೆ ಸಾಧ್ಯತೆ ಇಲ್ಲವಾಗಿದೆ.
ಆರ್.ಬಿ.ಐ. ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಈ ಬಗ್ಗೆ ಮಾತನಾಡಿದ್ದು, ಸದ್ಯಕ್ಕೆ ಬಡ್ಡಿದರ ಇಳಿಕೆ ಸಾಧ್ಯತೆ ಇಲ್ಲ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ಸಮಯವೇ ಹೇಳಲಿದೆ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ಪ್ರಮುಖ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರ ಹೆಚ್ಚಳ ಮಾಡಿವೆ. ಆರ್‌ಬಿಐ ಕಳೆದ ವರ್ಷ ಮೇ ನಿಂದ ರೆಪೊ ದರವನ್ನು 250 ಮೂಲಾಂಶಗಳಷ್ಟು ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೊ ದರ ಶೇಕಡ 6.5ಕ್ಕೆ ಏರಿಕೆ ಕಂಡಿದೆ. ಜುಲೈನಲ್ಲಿ ಶೇಕಡ 7.44ರಷ್ಟು ಇದ್ದ ಹಣದುಬ್ಬರ ಪ್ರಮಾಣ ಈಗ ಸ್ವಲ್ಪ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.