ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡದೆ ಟ್ವಿಟರ್ ತಮ್ಮ ವಿಲೀನ ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಹೇಳಿದ್ದು, ಟ್ವಿಟರ್ ಒಪ್ಪಂದ ಕೈಬಿಡುವುದಾಗಿಯೂ ತಿಳಿಸಿದ್ದಾರೆ.
ಬಿಲಿಯನೇರ್ ಬೇಡಿಕೆಯಿರುವ ಸ್ಪ್ಯಾಮ್ ಮತ್ತು ನಕಲಿ ಬಳಕೆದಾರರ ಖಾತೆಗಳ ಬಗ್ಗೆ ಕಂಪನಿಯು ಡೇಟಾವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ ಮಸ್ಕ್, ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ 44 ಬಿಲಿಯನ್ ಡಾಲರ್ ಒಪ್ಪಂದದಿಂದ ದೂರ ಸರಿಯಬಹುದು ಎಂದು ಎಚ್ಚರಿಸಿದ್ದಾರೆ.
ಟ್ವಿಟರ್ ತನ್ನ ಬೇಡಿಕೆ ಪರಿಗಣಿಸದ ಕಾರಣ ಒಪ್ಪಂದ ಉಲ್ಲಂಘಿಸಿದಂತಾಗಿದ್ದು, ವಿಲೀನ ಒಪ್ಪಂದವನ್ನು ಅಂತ್ಯಗೊಳಿಸಲು ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದ್ದೇವೆ ಎಂದು ಮಸ್ಕ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ತನ್ನ ನಕಲಿ ಖಾತೆಗಳ ಅನುಪಾತದ ಡೇಟಾವನ್ನು ಒದಗಿಸಬಹುದೆಂದು ಮಾರ್ಚ್ ನಿಂದಲೂ ಮಸ್ಕ್ ಕಾಯುತ್ತಿದ್ದಾರೆ.