![](https://kannadadunia.com/wp-content/uploads/2021/02/WhatsApp-Image-2021-02-08-at-12.05.12-PM.jpeg)
ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಹಾಕುವ ಒಂದೇ ಒಂದು ವಾಕ್ಯ ಅಥವಾ ಒಂದೆರಡು ಶಬ್ದಗಳಿಗೇ ಇಡೀ ಇಂಟರ್ನೆಟ್ನ್ನೇ ಅಲುಗಾಡಿಸುವಂತಹ ಶಕ್ತಿ ಇದೆ. ಈ ಮಾತಿಗೆ ಸಿಗ್ನಲ್ ಮೆಸೆಜಿಂಗ್ ಅಪ್ಲಿಕೇಶನ್, ಎಟ್ಸಿ, ಹೀಗೆ ನಾನಾ ಕಂಪನಿಗಳ ಬೆಳವಣಿಗೆಗಳೇ ಸಾಕ್ಷಿ.
ಮಸ್ಕ್ ಕಳೆದ ವರ್ಷ ತಮ್ಮ ಮಗನ ಹೆಸರನ್ನ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದರು. ಮಸ್ಕ್ರ ಗೆಳತಿ ಕೆಲ ಸಮಯದ ಹಿಂದಷ್ಟೇ ತಮ್ಮ 9 ತಿಂಗಳ ಮಗು X Æ A-Xii ನ ಕೇಶ ವಿನ್ಯಾಸ ಫೋಟೋಗಳನ್ನ ಹಂಚಿಕೊಂಡಿದ್ದರು.
ಇದೀಗ ಸ್ವತಃ ಎಲಾನ್ ಮಸ್ಕ್ ಕೂಡ ತಮ್ಮ ಮಗನ ಜೊತೆಗಿರುವ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿ ತಮ್ಮ ಪಿತೃತ್ವವನ್ನ ಸಂಭ್ರಮಿಸಿದ್ದಾರೆ. ಎರಡನೇ ಕೊನೆಯ ಸಾಮ್ರಾಜ್ಯ ಎಂದು ಈ ಫೋಟೋಗೆ ಮಸ್ಕ್ ಶೀರ್ಷಿಕೆ ನೀಡಿದ್ದಾರೆ. ಫೋಟೋದಲ್ಲಿ ಮಸ್ಕ್ರ ಪುತ್ರ X Æ A-Xii ಅವರ ಟೀ ಶರ್ಟ್ನ್ನು ಎಳೆಯುತ್ತಿದ್ದರೆ ಮಸ್ಕ್ ಫೋನ್ ಕಾಲ್ನಲ್ಲಿ ನಿರತರಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಎಲಾನ್ ಮಸ್ಕ್ ಹಾಗೂ ಅವರ ಗೆಳತಿ ಮೇ 4ರಂದು X Æ A-Xii ಗೆ ಜನ್ಮ ನೀಡಿದ್ದರು. ಈ ಮಗುವಿಗೆ ಮಸ್ಕ್ X Æ A-Xii ಎಂದು ನಾಮಕರಣ ಮಾಡುತ್ತಿದ್ದಂತೆಯೇ ನೆಟ್ಟಿಗರು ಈ ಹೆಸರಿನ ಅರ್ಥವೇನು ಅಂತಾ ಡಿಕೋಡ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದರು. ಇದಾದ ಬಳಿಕ ಮಸ್ಕ್ ಗೆಳತಿ ಗ್ರಿಮ್ಸ್ X Æ A-Xii ಹೆಸರಿನ ಪ್ರತಿಯೊಂದು ಶಬ್ದದ ಅರ್ಥವನ್ನ ವಿವರಿಸಿದ್ದರು.