ವಿಶ್ವದ ಶ್ರೀಮಂತ ಉದ್ಯಮಿ ಅಮೆಜಾನ್ ಡಾಟ್ ಕಾಂ ಮುಖ್ಯಸ್ಥ ಜೆಫ್ ಬೆಜೊಸ್ ಅವರನ್ನು ಹಿಂದಿಕ್ಕಿದ ಟೆಸ್ಲಾ ಇಂಕ್ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಬ್ಲೂಂಬರ್ಗ್ ನ್ಯೂಸ್ ಗುರುವಾರ ಈ ಕುರಿತು ವರದಿ ಮಾಡಿದ್ದು, ಟೆಸ್ಲಾ ಷೇರುಗಳಲ್ಲಿ ಗುರುವಾರ ಗಳಿಸಿದ ಲಾಭವನ್ನು ಒಳಗೊಂಡಂತೆ ಸಂಸ್ಥೆ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಸಂಪತ್ತು ಮೌಲ್ಯ 118.5 ಬಿಲಿಯನ್ ಡಾಲರ್ ಆಗಿದೆ. ಜೆಫ್ ಬೆಜೊಸ್ ಅವರಿಗಿಂತ 1.5 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಿದೆ.