ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ 1,00,000 ಟೆಸ್ಲಾ ವಾಹನಗಳಿಗೆ ಆರ್ಡರ್ ಮಾಡಿದ ನಂತರ ಸೋಮವಾರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು 36.2 ಶತಕೋಟಿ ಡಾಲರ್(2.71 ಲಕ್ಷ ಕೋಟಿ ರೂ.) ಹೆಚ್ಚಾಗಿದೆ.
ಟೆಸ್ಲಾ ಷೇರುಗಳು ಶೇಕಡ 14.9 ರಷ್ಟು ಏರಿಕೆಯಾಗಿ 1,045.02 ಡಾಲರ್ ಗೆ ತಲುಪಿದೆ. ಟ್ರಿಲಿಯನ್-ಡಾಲರ್ ಕಂಪನಿಯಲ್ಲಿ ಮಸ್ಕ್ ಶೇಕಡ 23 ರಷ್ಟು ಪಾಲು ಈಗ ಸುಮಾರು 289 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಟೆಸ್ಲಾ ಮಾರುಕಟ್ಟೆ ಮೌಲ್ಯವು ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ಮಾರ್ಕ್ ದಾಟಿದೆ.
ಟೆಸ್ಲಾ ಪ್ರಪಂಚದಾದ್ಯಂತ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರಬಹುದು. ಆದರೆ, ತನ್ನ ಮಾರುಕಟ್ಟೆ ಮೌಲ್ಯವನ್ನು ಇತ್ತೀಚಿಗೆ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ಮಾರ್ಕ್ ಅನ್ನು ದಾಟಿ ಮುನ್ನಡೆ ಸಾಧಿಸಿದೆ. ಹರ್ಟ್ಜ್ 1,00,000 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದಾಗಿ ದೃಢಪಡಿಸಿದ ನಂತರ ಟೆಸ್ಲಾದ ಮಾರುಕಟ್ಟೆ ಮೌಲ್ಯವು ಈ ಮಹತ್ವದ ಮೈಲಿಗಲ್ಲನ್ನು ದಾಟಿದೆ.
ಹರ್ಟ್ಜ್ ಕಾರು ಬಾಡಿಗೆಗೆ ನೀಡುವ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಇದರ ಜೊತೆಗೆ, CNBC ವರದಿಯ ಪ್ರಕಾರ, ಮಸ್ಕ್ ರಾಕೆಟ್ ತಯಾರಕ ಸ್ಪೇಸ್‌ಎಕ್ಸ್‌ನ ಪ್ರಮುಖ ಷೇರುದಾರ ಮತ್ತು CEO ಆಗಿದ್ದು, ಅಕ್ಟೋಬರ್ ನಲ್ಲಿ ಷೇರು ಮಾರಾಟದ ಪ್ರಕಾರ 100 ಶತಕೋಟಿ ಡಾಲರ್ ಮೌಲ್ಯದ ಖಾಸಗಿ ಕಂಪನಿಯಾಗಿದೆ. ಮಸ್ಕ್ ಅವರ ಒಟ್ಟು ನಿವ್ವಳ ಮೌಲ್ಯ 288.6 ಬಿಲಿಯನ್ ಡಾಲರ್ ಆಗಿದ್ದು, ಈಗ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್ ಅಥವಾ ನೈಕ್ ಇಂಕ್‌ನ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿದೆ. ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಲಾಭವಾಗಿದೆ,