ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ ಈ ಹಿನ್ನಡೆ ಅನುಭವಿಸಿದ್ದಾರೆ. ಮಂಗಳವಾರ ಮಸ್ಕ್ ಕಳೆದುಕೊಂಡ ಆಸ್ತಿಗಳ ಪ್ರಮಾಣವು ಭಾರತೀಯ ಕಂಪನಿಗಳಾದ ಟೈಟಾನ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ನ ಸಂಪೂರ್ಣ ಬೆಲೆಗೆ ಸಮನಾಗಿರುತ್ತದೆ.
ಭಾರತದಲ್ಲಿ ಕೇವಲ 21 ಕಂಪನಿಗಳು ಮಾತ್ರ ಒಂದು ದಿನದಲ್ಲಿ ಮಸ್ಕ್ ಕಳೆದುಕೊಂಡ ಮೊತ್ತಕ್ಕಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ಈ ಕುಸಿತದ ನಂತ್ರ ಮಸ್ಕ್ ವಿಶ್ವದ ಶ್ರೀಮಂತ ಪಟ್ಟಿಯಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಸ್ಕ್ ಈಗ ಫೋರ್ಬ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಆಗಸ್ಟ್ ಕೊನೆಯಲ್ಲಿ ಅವರು ಜೆಫ್ ಬೆಜೋಸ್ ಮತ್ತು ಬಿಲ್ ಗೇಟ್ಸ್ ನಂತರ ಮೂರನೇ ಸ್ಥಾನದಲ್ಲಿದ್ದರು.
ಮಂಗಳವಾರ, ಟೆಸ್ಲಾ ಷೇರುಗಳು ಶೇಕಡಾ 21 ರಷ್ಟು ಕುಸಿದವು. ಇದು ಒಂದು ದಿನದಲ್ಲಿ ಕಂಪನಿಯ ಷೇರುಗಳಲ್ಲಿ ಅತಿದೊಡ್ಡ ಕುಸಿತವಾಗಿದೆ. ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಈ ಕಂಪನಿ ಹೆಸರು ಎಸ್ & ಪಿ 500 ನಲ್ಲಿ ಸೇರಿಸಲಾದ ಕಂಪನಿಗಳ ಪಟ್ಟಿಯಲ್ಲಿಲ್ಲದ ಕಾರಣ ಈ ಕುಸಿತವಾಗಿದೆ ಎನ್ನಲಾಗ್ತಿದೆ.
ಇದಕ್ಕೂ ಮೊದಲು, ಕಂಪನಿಯ ಷೇರುಗಳು ಶುಕ್ರವಾರ ಐದು ಪಟ್ಟು ಹೆಚ್ಚಾಗಿತ್ತು. ಈಗ 16 ಬಿಲಿಯನ್ ಕುಸಿತದ ನಂತ್ರವೂ ಮಸ್ಕ್ 82.2 ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ.