ರಿಲಯನ್ಸ್ ಜಿಯೋ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ವಿಶೇಷ ಕೊಡುಗೆ ನೀಡಿದೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಸಣ್ಣ ಉದ್ಯಮಗಳಿಗೆ ಶೇಕಡಾ 10ರಷ್ಟು ಕಡಿಮೆ ವೆಚ್ಚದಲ್ಲಿ ಫೈಬರ್ ಸಂಪರ್ಕವನ್ನು ಜಿಯೋ ಒದಗಿಸುತ್ತಿದೆ.
ಇದು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಾಯವಾಗಲಿದೆ. ಬೇರೆ ಕಂಪನಿಗಳ ಬ್ರಾಡ್‌ಬ್ಯಾಂಡ್ ಮತ್ತು ವಾಯ್ಸ್ ಕೊಡುಗೆಗಾಗಿ ಉದ್ಯಮಿಗಳು ಪ್ರತಿ ತಿಂಗಳು 9,900 ರೂಪಾಯಿ ಪಾವತಿಸಬೇಕು. ಜಿಯೋ ಕೇವಲ 901 ರೂಪಾಯಿಯಲ್ಲಿ ಈ ಎಲ್ಲ ಸೇವೆ ನೀಡ್ತಿದೆ.
ಇದ್ರಲ್ಲಿ ವ್ಯಾಪಾರಸ್ಥರಿಗೆ 100 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಿದೆ. ಇದರಿಂದ ದೇಶದ 5 ಕೋಟಿ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸಣ್ಣ ಉದ್ಯಮಗಳು ಭಾರತದ ಆರ್ಥಿಕತೆಯ ಅಡಿಪಾಯ. ಜ್ಞಾನದ ಕೊರತೆಯಿಂದಾಗಿ, ಸಣ್ಣ ಉದ್ಯಮಗಳು ತಮ್ಮ ವ್ಯವಹಾರವನ್ನು ವೇಗವಾಗಿ ಬೆಳೆಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಸಾಧ್ಯವಾಗುವುದಿಲ್ಲ. ಜಿಯೋ ಬಿಸಿನೆಸ್ ಮೂಲಕ ಧ್ವನಿ ಮತ್ತು ಡೇಟಾ ಸೇವೆಗಳು, ಡಿಜಿಟಲ್ ಸಾಧನಗಳನ್ನು ಸಣ್ಣ ವ್ಯಾಪಾರಿಗಳಿಗೆ ನೀಡ್ತಿದೆ ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಜಿಯೋ 5001 ರೂಪಾಯಿಗೆ ಪ್ರತಿ ತಿಂಗಳು ವಿಶೇಷ ಆಫರ್ ನೀಡ್ತಿದೆ. ಸಣ್ಣ ವ್ಯಾಪಾರಿಗಳಿಗೆ 1ಜಿಬಿಪಿಎಸ್ ವೇಗದಲ್ಲಿ ಅನಿಯಮಿತ ಫೈಬರ್ ಬ್ರಾಡ್ಬ್ಯಾಂಡ್ ಹಾಗೂ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ನೀಡ್ತಿದೆ. ಇದಲ್ಲದೆ ಡಿಜಿಟಲ್ ಡಿವೈಸಸ್ ನೀಡ್ತಿದೆ.