ನವದೆಹಲಿ: ಪಿಂಚಣಿಯ ಮೂಲ ದಾಖಲೆಯಾಗಿರುವ ಪೆನ್ಷನ್ ಪೇಮೆಂಟ್ ಆರ್ಡರ್ ಮೂಲಪ್ರತಿ ಕೈತಪ್ಪಿ ಹೋಗುತ್ತಿದ್ದ ಕಾರಣ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ದೂರ ಮಾಡಲು ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶ(ಇ –ಪಿಪಿಒ) ವ್ಯವಸ್ಥೆ ಜಾರಿಗೆ ತಂದಿದೆ.
ಹೊಸ ವ್ಯವಸ್ಥೆಯಿಂದಾಗಿ ಪಿಂಚಣಿದಾರ ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಪಿಂಚಣಿದಾರರ ಕಲ್ಯಾಣ ಇಲಾಖೆ ಡಿಜಿಟಲೀಕರಣದ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಹಿರಿಯ ನಾಗರಿಕರಿಗೆ ಉಂಟಾಗುತ್ತಿದ್ದ ಸಮಸ್ಯೆಯನ್ನು ದೂರ ಮಾಡಿದೆ.
ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲವಾಗಿದೆ. ಪಿಂಚಣಿದಾರರು ತಮ್ಮ ಡಿಜಿ ಲಾಕರ್ ಅಕೌಂಟ್ ನಿಂದ ಇತ್ತೀಚಿನ ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶ ಪ್ರತಿಯನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.