ಬೆಂಗಳೂರು: ಸದ್ಯದಲ್ಲೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ಕಾದಿದೆ. ವಿದ್ಯುತ್ ವಿತರಣಾ ಕಂಪನಿಗಳು ಮತ್ತೆ ದರ ಪರಿಷ್ಕರಣೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಫೆಬ್ರವರಿ 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಅದಾಲತ್ ನಡೆಸಲಿದೆ.
ವಿದ್ಯುತ್ ವಿತರಣಾ ಕಂಪನಿಗಳು ಪ್ರತಿ ಯೂನಿಟ್ ಗೆ 1.50 ರೂ.ನಿಂದ 2 ರೂಪಾಯಿವರೆಗೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದಾಲತ್ ನಲ್ಲಿ ಸಾರ್ವಜನಿಕರ ಸಲಹೆ, ಸೂಚನೆ, ಆಕ್ಷೇಪಣೆ ಪರಿಗಣಿಸಿ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.