ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ಮೊಬೈಲ್ ಮಾದರಿಯಲ್ಲಿ ವಿದ್ಯುತ್ ಬಳಸುವ ಮೊದಲೇ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಖಾತೆಯಲ್ಲಿ ಹಣ ಖಾಲಿಯಾದರೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಪ್ರೀಪೇಯ್ಡ್ ಮೀಟರ್ ಅಳವಡಿಸಲು ಕ್ರಮಕೈಗೊಳ್ಳಲಾಗಿದ್ದು, ಗ್ರಾಹಕರೇ ಇದರ ವೆಚ್ಚವನ್ನು ಭರಿಸಬೇಕು ಎಂದು ಹೇಳಲಾಗಿದೆ.
ಬಡವರಿಗೆ ನೀಡುವ ಭಾಗ್ಯಜ್ಯೋತಿ ಯೋಜನೆ ವಿದ್ಯುತ್ ಸಂಪರ್ಕ ಕಡಿತವಾಗುವ ಆತಂಕವಿದ್ದು, ಕೃಷಿ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದರಿಂದ ಜನರಿಗೆ ಭಾರಿ ಹೊರೆಯಾಗಲಿದ್ದು, ಖಾತೆಯಲ್ಲಿ ಹಣ ಖಾಲಿಯಾದಾಗ ವಿದ್ಯುತ್ ಸಂಪರ್ಕ ಕಡಿತವಾಗಲಿದ್ದು, ಕಾರ್ಡ್ ರೀಚಾರ್ಜ್ ಮಾಡಿದಾಗ ಇಂತಿಷ್ಟು ಮೊತ್ತ ಕಡಿತವಾಗುತ್ತದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಅಗತ್ಯವಿರುವಷ್ಟು ವಿದ್ಯುತ್ ಖರೀದಿಗೆ ಅವಕಾಶ ಸಿಗಲಿದೆ. ಎಲ್ಲವೂ ಸ್ವಯಂಚಾಲಿತವಾಗಲಿದ್ದು, ವಿದ್ಯುತ್ ಬಳಸುವ ಪ್ರಮಾಣದ ಮಾಹಿತಿ ಎಸ್ಎಂಎಸ್ ಮೂಲಕ ಮೊಬೈಲ್ ಗೆ ಬರಲಿದೆ. ಮೊದಲೇ ಹಣ ಸಂಗ್ರಹಿಸುವುದರಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಆರ್ಥಿಕ ಶಕ್ತಿ ಬರಲಿದೆ ಎನ್ನಲಾಗಿದೆ.