ಬೆಂಗಳೂರು: ಗೃಹ ಬಳಕೆದಾರರಿಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆ ಜುಲೈ 1ರಿಂದ ಬಳಕೆಯಾಗುವ ವಿದ್ಯುತ್ ಗೆ ಅನ್ವಯವಾಗುತ್ತದೆ. ಆಗಸ್ಟ್ 1 ರಿಂದ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆದಾರರು ಬಿಲ್ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
200 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು. 200 ಯೂನಿಟ್ ಮೀರಿದರೆ ಪೂರ್ಣ ಬಿಲ್ ಪಾವತಿಸಬೇಕು. ಬಾಡಿಗೆ ಮನೆಯಲ್ಲಿರುವವರಿಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. 12 ತಿಂಗಳ ವಿದ್ಯುತ್ ಬಳಕೆ ಸರಾಸರಿ ತೆಗೆದು ಅದಕ್ಕೆ ಶೇಕಡ 10ರಷ್ಟು ಸೇರಿಸಿ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ನೀಡಲಾಗುತ್ತದೆ.
ಇದುವರೆಗೆ ಬಾಕಿ ಉಳಿಸಿಕೊಂಡ ಬಿಲ್ ಗ್ರಾಹಕರು ಪಾವತಿಸಬೇಕಿದೆ. ಫಲಾನುಭವಿಗಳ ವಿದ್ಯುತ್ ಬಳಕೆಯ ಹಿಂದಿನ 12 ತಿಂಗಳ ಸರಾಸರಿ ಲೆಕ್ಕ ಹಾಕಿ, ಅದಕ್ಕೆ ಶೇಕಡ 10 ರಷ್ಟು ಹೆಚ್ಚುವರಿ ಯುನಿಟ್ ಗಳನ್ನು ಕೂಡಿ ಅಷ್ಟು ಬಳಕೆವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ. ಉದಾಹರಣೆಗೆ ಒಂದು ಮನೆಯ 12 ತಿಂಗಳ ವಿದ್ಯುತ್ ಸರಾಸರಿ ಬಳಕೆ 80 ಯೂನಿಟ್ ಆಗಿದ್ದರೆ ಅದಕ್ಕೆ ಹೆಚ್ಚುವರಿ 10ರಷ್ಟು ಅಂದರೆ 8 ಯುನಿಟ್ ಸೇರಿಸಿ 88 ಯೂನಿಟ್ ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿದೆ.