
ಬೆಂಗಳೂರು: ರಾಜ್ಯದ ಜನತೆಗೆ ಇಂದಿನಿಂದ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ರಾಜ್ಯದಲ್ಲಿ ಅ. 1 ರ ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಲಿದೆ.
ಪ್ರತಿ ಯೂನಿಟ್ ಮೇಲೆ 23 ರಿಂದ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳವಾಗಲಿದೆ. ಯೂನಿಟ್ ಗೆ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳ ಮಾಡಿ ಕೆ.ಇ.ಆರ್.ಸಿ. ಆದೇಶಿಸಿದೆ. ಎಸ್ಕಾಂ ಗಳು ಸಲ್ಲಿಸಿದ್ದ ಮನವಿ ಮೇರೆಗೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದ್ದು, ಇಂದಿನಿಂದ ಗ್ರಾಹಕರಿಗೆ ಬಿಸಿ ತಟ್ಟಲಿದೆ ಎನ್ನಲಾಗಿದೆ.