ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದ್ದು, ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ದರ ಹೆಚ್ಚಳಕ್ಕೆ ಸಮ್ಮತಿ ಸೂಚಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ಗೆ 30 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಸಮ್ಮತಿಸಿದೆ. ಆರಂಭದ 30 ಯೂನಿಟ್ ಗಳನ್ನು ಲೈಫ್ ಲೈನ್ ಯೂನಿಟ್ ಎಂದು ಪರಿಗಣಿಸಲಾಗಿದ್ದು, ಈಗ 50 ಯೂನಿಟ್ ಗೆ ಹೆಚ್ಚಿಸಲಾಗಿದೆ. ಆರಂಭದ 30 ಯೂನಿಟ್ ಗಳ ರಿಯಾಯಿತಿ ದರ 50 ಯೂನಿಟ್ ಗೆ ಅನ್ವಯವಾಗಲಿದೆ. ಇದರಿಂದ ಬಳಕೆದಾರರಿಗೆ ಅನುಕೂಲವಾಗುತ್ತದೆ.
ಮೆಸ್ಕಾಂ ವ್ಯಾಪ್ತಿಯ ನಗರ, ಪಟ್ಟಣಗಳಲ್ಲಿ
1 -50 ಯೂನಿಟ್ ಗೆ 4.05 ರೂ.
50 ರಿಂ 100 ಯೂನಿಟ್ ಗೆ 5.55 ರೂ.
101 ರಿಂದ 200 ಯೂನಿಟ್ ಗೆ 7.10 ರೂ.
200 ಯೂನಿಟ್ ಗಿಂತ ಮೇಲ್ಪಟ್ಟು 8.15 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಮೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ
1 -50 ಯೂನಿಟ್ ಗೆ 3.95 ರೂ.
50 ರಿಂ 100 ಯೂನಿಟ್ ಗೆ 5.25 ರೂ.
101 ರಿಂದ 200 ಯೂನಿಟ್ ಗೆ 6.80 ರೂ.
200 ಯೂನಿಟ್ ಗಿಂತ ಮೇಲ್ಪಟ್ಟು 7.65 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಎಲ್ಲಾ ವರ್ಗದ ಗ್ರಾಹಕರಿಗೆ ಅನ್ವಯವಾಗುವಂತೆ ಪ್ರತಿ ದಿನಕ್ಕೆ 30 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.