ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮತ್ತೆ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದೆ.
ಎರಡು ತಿಂಗಳ ಅಂತರದಲ್ಲಿ ಬೆಸ್ಕಾಂ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದ್ದು, ಪ್ರತಿ ಯೂನಿಟ್ ಗೆ 8 ಪೈಸೆ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದೆ. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಭರಿಸಬೇಕಿರುವುದರಿಂದ ಬೆಸ್ಕಾಂ 8 ಪೈಸೆ ಹೆಚ್ಚಳ ಮಾಡಲಿದೆ.
ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂಗೆ ಯುನಿಟ್ ಗೆ 5 ಪೈಸೆ ಹಾಗೂ ಹೆಸ್ಕಾಂಗೆ ಯುನಿಟ್ ಗೆ 4 ಪೈಸೆ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೀಡಿದೆ ಎನ್ನಲಾಗಿದೆ.