ಮೊಟ್ಟೆ ದರ ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದು, ಒಂದು ಮೊಟ್ಟೆಗೆ 10 ರಿಂದ 50 ಪೈಸೆಯವರೆಗೂ ಬೆಲೆ ಹೆಚ್ಚಳವಾಗಿದ್ದು ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಒಂದು ಮೊಟ್ಟೆಗೆ 5.60 ರೂ.ವರೆಗೂ ಬೆಲೆ ಇದೆ. ರಿಟೇಲ್ ಮಾರುಕಟ್ಟೆಯಲ್ಲಿ 6.50 ರೂ.ವರೆಗೂ ಮೊಟ್ಟೆ ದರ ಇದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ಕೋಳಿ ಫಾರಂ ಬಂದ್ ಆಗಿದ್ದರಿಂದ ಈಗ ಮೊಟ್ಟೆಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.