ಬೆಂಗಳೂರು: ಕೋಳಿ ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮೊಟ್ಟೆ ದರ 4.5 ರೂಪಾಯಿಂದ 6.5 ರೂಪಾಯಿಗೆ ಏರಿಕೆಯಾಗಿದೆ.
ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಬೆಲೆ ಏರಿಕೆಯಾಗಿದೆ. ಅಲ್ಲದೆ, ಕೋಳಿ ಆಹಾರದ ಬೆಲೆ ಏರಿಕೆ, ಕೋಳಿಗಳ ನಾಶ, ಕೆಲವರು ಉದ್ಯೋಗ ತೊರೆದಿರುವುದು, ಮೊಟ್ಟೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇವೇ ಮೊದಲಾದ ಕಾರಣದಿಂದ ಒಂದು ಮೊಟ್ಟೆಯ ದರ 6.5 ರೂಪಾಯಿಗಿಂತ ಹೆಚ್ಚಾಗಿದೆ ಎನ್ನಲಾಗಿದೆ.
ಕೋಳಿಗಳ ಆಹಾರ ಪ್ರತಿ ಕೆಜಿಗೆ 35 ರೂ.ನಷ್ಟು ಜಾಸ್ತಿಯಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಪ್ರತಿದಿನ ಸುಮಾರು 1.5 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. 50 ಲಕ್ಷದಷ್ಟು ಮೊಟ್ಟೆಗಳನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 1.30 ಕೋಟಿಯಷ್ಟು ಮೊಟ್ಟೆ ಮಾರಾಟವಾಗುತ್ತದೆ. ಲಾಕ್ ಡೌನ್ ಸೇರಿದಂತೆ ವಿವಿಧ ಕಾರಣದಿಂದ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಮೊಟ್ಟೆ ದರ ಏರಿಕೆಯಾಗಿದೆ ಎಂದು ಹೇಳಲಾಗಿದೆ.